ಪತ್ನಿಯನ್ನು ಕೊಂದು ತಾನೂ ನೇಣು ಬಿಗಿದು ಆತ್ಮಹತ್ಯೆಗೈದ ಪತಿ
ಧಾರವಾಡ: ಹೆಂಡತಿಯನ್ನು ಕೊಂದ ಪತಿರಾಯ ಕೊನೆಗೆ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಇಲ್ಲಿಯ ಗಣೇಶ ನಗರದಲ್ಲಿ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು, ಧಾರವಾಡದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಗಣೇಶ ನಗರದ ಗೌಳಿ ಜನಾಂಗದ ಮನಿಶಾ ಹಾಗೂ ಶೆಟ್ಟು ಎಂಬ ದಂಪತಿಯೇ ಸಾವಿಗೀಡಾದವರು. ಮೊದಲು ಪತ್ನಿ ಮನಿಶಾಳ ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.




