February 3, 2026

ರೈಲ್ವೆ ಹಳಿಗಳಲ್ಲಿ ಬಾಂಬ್ ಪತ್ತೆ

0
image_editor_output_image925544435-1646989309435.jpg

ಗಯಾ: ಬಿಹಾರದ ಗಯಾ ಜಿಲ್ಲೆಯ ಗುರಾರು ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಗಳಲ್ಲಿ ಬಾಂಬ್ ಪತ್ತೆಯಾಗಿದ್ದು, ಇದರಿಂದ ರೈಲ್ವೆ ಕಾರ್ಯಾಚರಣೆಗೆ ತೊಡಕುಂಟಾಗಿದೆ.

“ಗುರಾರು ರೈಲು ನಿಲ್ದಾಣದ ಬಳಿಯ ರೈಲ್ವೇ ಹಳಿಯಲ್ಲಿ ಕಚ್ಚಾ ಬಾಂಬ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಎರಡು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬಾಂಬ್ ಪತ್ತೆಯಾದ ಸ್ಥಳ ರೈಲ್ವೆ ನಿಲ್ದಾಣದಿಂದ ಕೇವಲ 100 ಮೀಟರ್ ವ್ಯಾಪ್ತಿಯಲ್ಲಿದೆ” ಎಂದು ಗಯಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮನೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದು ಕಡಿಮೆ ತೀವ್ರತೆಯ ಬಾಂಬ್ ಆಗಿದ್ದರಿಂದ ಅದನ್ನು ಹಳಿಗಳ ಮೇಲೆಯೇ ನಿಷ್ಕ್ರಿಯಗೊಳಿಸಲಾಯಿತು. ಬಾಂಬ್ ಇಟ್ಟಿರುವ ಹಿಂದಿನ ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ” ಎಂದು ಮನೀಶ್ ಕುಮಾರ್ ತಿಳಿಸಿದ್ದಾರೆ

ಗಯಾ ಜಿಲ್ಲೆಯಲ್ಲಿ ನಕ್ಸಲರು ಪೊಕ್ಲೇನ್ ಮಷಿನ್‌ಗೆ ಬೆಂಕಿ ಹಚ್ಚಿದ ಒಂದು ದಿನದ ನಂತರ ಈ ಬಾಂಬ್ ಭೀತಿ ಎದುರಾಗಿದೆ . ಗಯಾದ ದುಮಾರಿಯಾ ಬ್ಲಾಕ್‌ನ ಪಿಪರ್ವಾರ್ ಗ್ರಾಮದ ಬಳಿ ನಕ್ಸಲರು ಪೊಕ್ಲೇನ್ ಯಂತ್ರಕ್ಕೆ ಬೆಂಕಿ ಹಚ್ಚಿದ್ದರು.

Leave a Reply

Your email address will not be published. Required fields are marked *

error: Content is protected !!