July 5, 2026

ಮುಸ್ಲಿಮರು ಬಿಎಸ್ಪಿಗೆ ಮತ ಹಾಕಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ: ಮಾಯಾವತಿ ಅಸಮಾಧಾನ

0
Screenshot_2022-03-11-14-42-52-69_680d03679600f7af0b4c700c6b270fe7.jpg

ಲಖನೌ: ಮುಸ್ಲಿಮರು ಬಿಎಸ್ ಪಿಗೆ ಮತ ಹಾಕಿದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ ಎಂದು ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅಸಮಾಧಾನ ಹೊರಹಾಕಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿರುವ ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷ ಹೀನಾಯ ಪ್ರದರ್ಶನ ತೋರಿದ್ದು, ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಮಾಯಾವತಿ, ‘ಮುಸ್ಲಿಂ ಸಮುದಾಯದ ಮತಗಳು ದಲಿತರ ಬಳಿ ಇದ್ದಿದ್ದರೆ, ಫಲಿತಾಂಶವು ಅದ್ಭುತವಾಗಿರುತ್ತಿತ್ತು. ಆದರೆ ಮನುವಾದಿ ಮಾಧ್ಯಮಗಳು ಎಸ್‌ಪಿ ಮಾತ್ರ ಬಿಜೆಪಿಯನ್ನು ತಡೆಯಲು ಸಾಧ್ಯ ಎಂದು ನಿರೂಪಣೆ ಮಾಡುವುದರೊಂದಿಗೆ, ಮುಸ್ಲಿಮರು ಸಂಪೂರ್ಣವಾಗಿ ಎಸ್‌ಪಿಗೆ ಬೆಂಬಲ ಸೂಚಿಸಿವೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

You may have missed

error: Content is protected !!