ತಾರತಮ್ಯ ಆರೋಪ: ಫೇಸ್‌ಬುಕ್, ಟ್ವಿಟರ್ ಮೇಲೆ ನಿಷೇಧ ಹೇರಿದ ರಷ್ಯಾ
ಮಾಸ್ಕೊ: ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾರತಮ್ಯ ತೋರಿದೆ ಎಂದು ಆರೋಪಿಸಿರುವ ರಷ್ಯಾದ ಮಾಧ್ಯಮ ನಿಯಂತ್ರಕ (Roskomnadzor), ಫೇಸ್‌ಬುಕ್ ಹಾಗೂ ಟ್ವಿಟರ್ ಮೇಲೆ ನಿಷೇಧ ಹೇರಿದೆ.
ಇದರ ಜೊತೆಗೆ ಬಿಬಿಸಿ, ಆ್ಯಪಲ್ ಹಾಗೂ ಗೂಗಲ್ ಆ್ಯಪ್ ಸ್ಟೋರ್‌ಗಳ ಮೇಲೂ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: ‘ನೊ-ಫ್ಲೈ ಜೋನ್’ ಮನವಿ ತಿರಸ್ಕಾರ; ನ್ಯಾಟೊ ನಿಲುವು ಖಂಡಿಸಿದ ಝೆಲೆನ್‌ಸ್ಕಿ
ಉಕ್ರೇನ್ ಸಂಘರ್ಷದ ವರದಿಗೆ ಸಂಬಂಧಿಸಿದಂತೆ ರಷ್ಯಾ ಮಾಧ್ಯಮಗಳ ಮೇಲೆ ಫೇಸ್‌ಬುಕ್ ಹಾಗೂ ಟ್ವಿಟರ್ ನಿರ್ಬಂಧವನ್ನು ಹೇರಿತ್ತು. ಈ ತಾರತಮ್ಯ ಧೋರಣೆಯನ್ನು ಖಂಡಿಸಿರುವ ರಷ್ಯಾ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
2020 ಅಕ್ಟೋಬರ್‌ನಿಂದ ರಷ್ಯಾದ ಮಾಧ್ಯಮಗಳ ಮೇಲೆ ನಿರ್ಬಂಧಕ್ಕೆ ಸಂಬಂಧಿಸಿದಂತೆ 26 ಪ್ರಕರಣ ಫೇಸ್‌ಬುಕ್ ದಾಖಲಿಸಿದೆ. ಆರ್‌ಟಿ ಮತ್ತು ಆರ್‌ಐಎ ನ್ಯೂಸ್ ಏಜೆನ್ಸಿ ಮೇಲಿನ ಇತ್ತೀಚಿನ ನಿರ್ಬಂಧಗಳು ಇದು ಒಳಗೊಂಡಿವೆ ಎಂದು ಹೇಳಿದೆ.




