February 1, 2026

ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಕ್ಕೆ ಡಿಬಾರ್: ಹಾಸ್ಟೆಲ್ ಕಟ್ಟಡದಿಂದ ಹಾರಿ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

0
image_editor_output_image854410824-1646457984155.jpg

ಬೆಂಗಳೂರು: ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಕ್ಕೆ ಡಿಬಾರ್ ಆದ ಬಿಕಾಂ ವಿದ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ  5ನೇ ಮಹಡಿಯಿಂದ  ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ.

ಕೋರಮಂಗಲದ ಜ್ಯೋತಿನಿವಾಸ್​ನಲ್ಲಿ ಬಿಕಾಂ ಓದುತ್ತಿದ್ದ 19 ವರ್ಷದ  ಭವ್ಯ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ಕಾಲೇಜಿನಲ್ಲಿ ಡಿಬಾರ್​ ಮಾಡಲಾಗಿತ್ತು. ನನ್ನನ್ನು ಡಿಬಾರ್ ಮಾಡಿದ್ದಾರೆ. ನಾನು​ ಬದುಕಲ್ಲ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಕಟ್ಟಡದಿಂದ ಹಾರುವ ಮುನ್ನ ಸಹೋದರಿ ದಿವ್ಯಾಗೆ ಫೋನ್​​​ ಮಾಡಿ ಹೇಳಿಕೊಂಡಿದ್ದಾಳೆ.

ಭವ್ಯಾ ಕರೆ ಮಾಡಿದ್ದನ್ನು ದಿವ್ಯಾ ತನ್ನ ತಂದೆಗೆ ತಿಳಿಸಿದ್ದಾಳೆ, ಮುಳುಬಾಗಿಲಿನಿಂದ ಭವ್ಯ ತಂದೆ ಕೂಡಲೇ ಪಿಜಿ ಬಳಿ ಬಂದಿದ್ದಾರೆ. ಸ್ಥಳಕ್ಕೆ ಬರುವ ವೇಳೆಗೆ ಪೊಲೀಸರಿಂದ ಕರೆ ಬಂದಿದೆ. ಸದ್ಯ ಈ ಬಗ್ಗೆ ಜೀವನ್​​ ಭೀಮಾ ನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!