February 1, 2026

ಉಕ್ರೇನ್‌ನಿಂದ ದಿಲ್ಲಿಗೆ ವಾಪಸಾದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬುಲೆಟ್‌ ಪತ್ತೆ

0
Screenshot_2022-03-05-11-17-01-08_680d03679600f7af0b4c700c6b270fe7.jpg

ಹೊಸದಿಲ್ಲಿ: ಉಕ್ರೇನ್‌ನಿಂದ ಗುರುವಾರ ದಿಲ್ಲಿಗೆ ವಾಪಸಾದ ಕೇರಳ ಮೂಲದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬುಲೆಟ್‌ ಪತ್ತೆಯಾಗಿದೆ.

ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಿಐಎಸ್‌ಎಫ್ ನ ಸಿಬಂದಿ ವಿದ್ಯಾರ್ಥಿಯ ಬ್ಯಾಗ್‌ ಅನ್ನು ತಪಾಸಣೆ ನಡೆಸಿದ ವೇಳೆ ಗುಂಡು ಪತ್ತೆಯಾಯಿತು.

ತತ್‌ಕ್ಷಣ ಸಿಐಎಸ್‌ಎಫ್ ಅಧಿಕಾರಿಗಳು ವಿದ್ಯಾರ್ಥಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದರು. ದಿಲ್ಲಿಯಿಂದ ಏರ್‌ ಏಷ್ಯಾ ವಿಮಾನ ಮೂಲಕ ಗುರುವಾರವೇ ಈ ವಿದ್ಯಾರ್ಥಿ ಕೇರಳಕ್ಕೆ ಪ್ರಯಾಣ ಬೆಳೆಸಬೇಕಿತ್ತು.

ಯುದ್ಧಪೀಡಿತ ಪ್ರದೇಶದಿಂದ ತಾಯ್ನಾಡಿಗೆ ವಾಪಸಾದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗುಂಡು ಪತ್ತೆಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!