ಜಂತರ್ ಮಂತರ್ ಪ್ರತಿಭಟನೆ ಹಿನ್ನೆಲೆ: ಅಭಿಜೀತ್ ದೀಪೈ ಸೌರವ್ ದಾಸ್, ಆಶುತೋಷ್ ರಂಕಾರನ್ನು ವಶಕ್ಕೆ ಪಡೆದ ಪೊಲೀಸರು
ಹೊಸದಿಲ್ಲಿ : ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಿನ್ನೆಲೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಭಿಜೀತ್ ದೀಪೈ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಗೆ ಮುನ್ನ ಪೊಲೀಸರು ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಶನಿವಾರ ಮುಂಜಾನೆ ವಶಕ್ಕೆ ಪಡೆದಿದ್ದರು.
ದಿಲ್ಲಿ ಪೊಲೀಸರು ಗುರುಗ್ರಾಮ್ ಪೊಲೀಸರ ನೆರವಿನೊಂದಿಗೆ ಧ್ರುವ್ ರಾಠಿ ಅವರನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜಾನ್ ಬ್ರಿಟ್ಬಾಸ್ ಮತ್ತು ಕೆ.ಎನ್. ಬಾಲಗೋಪಾಲ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.






