ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆ: ಮೃತದೇಹದ ಕಾಲುಗಳಿಗೆ ಸರಪಳಿ, ಬೀಗ ಹಾಕಲಾಗಿತ್ತು: ಕೊಲೆ ಶಂಕೆ
ಮುಂಬೈ: ಮಹಾರಾಷ್ಟ್ರದ ಧುಳೆ ಜಿಲ್ಲೆಯ ತಾಪಿ ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಕಾಲುಗಳಿಗೆ ಸರಪಳಿ, ಅದಕ್ಕೆ ಬೀಗ ಬಿಗಿದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪತ್ತೆಯಾದ ಈ ದಂಪತಿಯನ್ನು ಮೂಲತಃ ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನವರಾದ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ. ಇಬ್ಬರು ಕೇವಲ ಕೆಲವು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಎರಡು ಮೃತದೇಹಗಳು ತಾಪಿ ನದಿಯ ತಳದಲ್ಲಿ ಸಿಕ್ಕಿವೆ. ಶವಗಳ ಕಾಲಿಗೆ ಕಬ್ಬಿಣದ ಸರಪಳಿ ಬಿಗಿದು, ಅದಕ್ಕೆ ಬೀಗ ಹಾಕಿರುವುದು ಕಂಡುಬಂದಿದೆ. ಹೀಗಾಗಿ ಇದು ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬ ಶಂಕೆ ವ್ಯಕ್ತವಾಗಿದೆ.






