February 1, 2026

ದೇವಸ್ಥಾನದಲ್ಲಿ ಕುಸಿದುಬಿದ್ದು ಗರ್ಭಿಣಿ ಮೃತ್ಯು

0
image_editor_output_image294986146-1646459657491.jpg

ಮಂಡ್ಯ: ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಡುವ ವೇಳೆ ಗರ್ಭಿಣಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ತೆಂಕಹಳ್ಳಿ ಸಮೀಪದ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮೃತರನ್ನು ಟಿ.ನರಸೀಪುರ ತಾಲೂಕಿನ ಕಟ್ಟೇಪುರ ಗ್ರಾಮದ ಉಮೇಶ್ ಅವರ ಪತ್ನಿ ಪಂಕಜಾ (26) ಎಂದು ಗುರುತಿಸಲಾಗಿದೆ.

ಪಂಕಜಾ ಅವರಿಗೆ ಒಂದೂವರೆ ವರ್ಷದ ಗಂಡು ಮಗುವಿದ್ದು, ಎರಡನೇ ಮಗುವಿಗೆ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಕರ ಸಲಹೆಯಂತೆ ತೆಂಕಹಳ್ಳಿ ಸಮೀಪದ ಶನೈಶ್ಚರಸ್ವಾಮಿ ದೇವಸ್ಥಾನಕ್ಕೆ ಪತಿ ಉಮೇಶ್​ ಕುಟುಂಬದವರ ಜತೆಗೂಡಿ ಕಾರಿನಲ್ಲಿ ಗುರುವಾರ ಆಗಮಿಸಿದ್ದರು. ಆದರೆ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಡುವ ಸಮಯದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!