ತಿರುಗೇಟು ನೀಡಿದ ಉಕ್ರೇನ್: ರಷ್ಯಾ ಸೇನೆಗೆ ಸೇರಿದ 7 ಯುದ್ಧ ವಿಮಾನಗಳು, 6 ಸೇನಾ ಕಾಪ್ಟರ್ ಗಳು, 30 ಯುದ್ಧ ಟ್ಯಾಂಕರ್ ಗಳ ಧ್ವಂಸ

ಕೀವ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆ ಖಡಕ್ ತಿರುಗೇಟು ನೀಡುತ್ತಿರುವ ಉಕ್ರೇನ್ ಸೈನಿಕರು ಮೊದಲ ದಿನವೇ ಭಾರಿ ಪ್ರಮಾಣದ ವಿಧ್ವಂಸ ಮಾಡಿದ್ದು, 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಮುಂದುವರೆದಿರುವಂತೆಯೇ ಇದಕ್ಕೆ ತನ್ನದ ಆದ ರೀತಿಯಲ್ಲಿ ತಿರುಗೇಟು ನೀಡುತ್ತಿರುವ ಉಕ್ರೇನ್ ಭದ್ರತಾ ಪಡೆಗಳು ಮೊದಲ ದಿನವೇ 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೇ ರಷ್ಯಾ ಸೇನೆಗೆ ಸೇರಿದ 7 ಯುದ್ಧ ವಿಮಾನಗಳು, 6 ಸೇನಾ ಕಾಪ್ಟರ್ ಗಳು, 30 ಯುದ್ಧ ಟ್ಯಾಂಕರ್ ಗಳನ್ನು ಧ್ವಂಸ ಮಾಡಿವೆ.