ರಷ್ಯಾದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಫೇಸ್‌ಬುಕ್
ಸ್ಯಾನ್‌ಫ್ರಾನ್ಸಿಸ್ಕೊ: ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲಿನ ದಾಳಿಯ ಪರಿಣಾಮವಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಣ ಸಂಪಾದಿಸುವ ರಷ್ಯಾದ ಮಾಧ್ಯಮಗಳಿಗೆ ಫೇಸ್‌ಬುಕ್ ನಿರ್ಬಂಧ ವಿಧಿಸಿದೆ.
‘ನಾವು ಈಗ ರಷ್ಯಾದ ಮಾಧ್ಯಮಗಳು ವಿಶ್ವದ ಯಾವುದೇ ಭಾಗದಲ್ಲಿ ನಮ್ಮ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸುತ್ತಿದ್ದೇವೆ’ ಎಂದು ಫೇಸ್‌ಬುಕ್‌ನ ಭದ್ರತಾ ನೀತಿ ವಿಭಾಗ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಫೇಸ್‌ಬುಕ್ ‘ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಿಗೆ ಲೇಬಲ್ ಹಾಕುವುದನ್ನು ಮುಂದುವರಿಸುತ್ತದೆ’ ಎಂದು ಅವರು ಹೇಳಿದ್ದಾರೆ.