ಪೊಲೀಸರ ಕಿರುಕುಳದಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣು
ಬೆಂಗಳೂರು: ಪೊಲೀಸರ ಕಿರುಕುಳ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ನೊಂದ ಗೃಹಿಣಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ.
ಮಾರುತಿನಗರದ ಅಖಿಲಾ (35) ನೇಣಿಗೆ ಶರಣಾದವರು.ಆತ್ಮಹತ್ಯೆಗೂ ಮುನ್ನ ಮಹಿಳೆಯು ಸಾಲದ ಹಣಕ್ಕಾಗಿ ಚಂದನ್ ಎಂಬಾತ ಕೊಡುತ್ತಿದ್ದ ಕಾಟ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ ಬರೆದಿಟ್ಟಿದ್ದಾರೆ.
ಮಧುಸೂಧನ್ ಇಲ್ಲದ ವೇಳೆ ಮನೆಗೆ ಬಂದ ಪೊಲೀಸರು, ಅಖಿಲಾರನ್ನು ಪೊಲೀಸ್ ಜೀಪ್ನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಮಹಿಳೆ ಠಾಣೆಯಿಂದ ವಾಪಸ್ ಬಂದ ನಂತರ ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





