ನನ್ನ ಹತ್ಯೆ ಮಾಡಿದರೆ ಅಮೆರಿಕವು ಇರಾನ್ ದೇಶವನ್ನು ಸರ್ವನಾಶ ಮಾಡಲಿದೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ನನ್ನ ಹತ್ಯೆಗೆ ಪ್ರಯತ್ನಗಳು ನಡೆದರೆ ಅಥವಾ ನನ್ನ ಹತ್ಯೆ ಮಾಡಿದ್ರೆ ಅಮೆರಿಕವು ಇರಾನ್ ದೇಶವನ್ನ ಸರ್ವನಾಶ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷರು ಖಮೇನಿಯವರ 40 ವರ್ಷಗಳ ಆಳ್ವಿಕೆಯನ್ನ ಕೊನೆಗೊಳಿಸಬೇಕೆಂದು ಕರೆ ನೀಡಿದ ಕೆಲವು ದಿನಗಳ ನಂತರ, ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಇರಾನ್ ಮಂಗಳವಾರ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ.




