ಸಿಡಿಲು ಬಡಿದು ಇಬ್ಬರು ಸಾವು
ಕೊಪ್ಪಳ: ಸಿಡಿಲು ಬಡಿದು ಇಬ್ಬರು ಸಾವಿಗೀಡಾದ ಘಟನೆ ಕೊಪ್ಪಳದ ಚುಕ್ಕನಕಲ್ ಬಳಿ ನಡೆದಿದೆ.
ಮೃತರನ್ನು ಮಂಜುನಾಥ ಗಾಳಿ (48) ಗೋವಿಂದಪ್ಪ ಮ್ಯಾಗಲಮನಿ (62) ಎಂದು ಗುರುತಿಸಲಾಗಿದೆ. ಇಬ್ಬರೂ ಗುರುವಾರ ಸಂಜೆ ಗ್ರಾಮದ ತೋಟದ ಮನೆಯಲ್ಲಿದ್ದರು.
ಈ ವೇಳೆ ಮಳೆ ಬಂದಿದ್ದು, ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.





