ಖತರ್: Al-Udeid ವಾಯುನೆಲೆಗೆ ಇರಾನ್ ನ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ದೋಹಾ: ಖತರ್ ನ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್ ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಖತರ್ ರಕ್ಷಣಾ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
ಹಾರಿಸಲಾದ ಎರಡು ಕ್ಷಿಪಣಿಗಳಲ್ಲಿ ಒಂದನ್ನು ವಾಯು ರಕ್ಷಣಾ ವ್ಯವಸ್ಥೆ ಮಧ್ಯಾಕಾಶದಲ್ಲೇ ತಡೆಹಿಡಿದಿದೆ. ಮತ್ತೊಂದು ಕ್ಷಿಪಣಿ ಅಮೆರಿಕ ಪಡೆಗಳಿರುವ ಅಲ್ ಉದೈದ್ ವಾಯುನೆಲೆಯ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಸಚಿವಾಲಯ ಹೇಳಿದೆ.





