ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಫ್ಲೋರಿಡಾ: ಕಳೆದ ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದ್ದಾರೆ.
ಸುನೀತಾ ವಿಲಿಯಮ್ಸ್ , ಬುಚ್ ವಿಲ್ಮೋರ್, ನಿಕ್ ಹೇಗ್ , ಅಲೆಕ್ಸಾಂಡರ್ ಗೊರ್ಬನೊವ್ ಅವರಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಫ್ಲಾರಿಡಾದ ಕಡಲ ತೀರಕ್ಕೆ ಬಂದಿಳಿದಿದೆ.
ಸಮುದ್ರದಲ್ಲಿ ಇಳಿಯುತ್ತಿದ್ದಂತೆ ತ್ವರಿತ ಕಾರ್ಯಾಚರಣೆ
ಸುನೀತ್ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಹೊತ್ತು ಬಂದು ನೌಕೆ ಫ್ಲೋರಿಡಾದಲ್ಲಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಇಳಿದಿತ್ತು. ನೌಕೆ ಸಮುದ್ರದಲ್ಲಿ ಇಳಿಯುತ್ತಿದ್ದಂತೆ ನಾಸಾ ಸಿಬ್ಬಂದಿಗಳು, ಸ್ಪೇಸ್ ಎಕ್ಸ್ ಸಿಬ್ಬಂದಿಗಳು, ವಿಶೇಷ ಹಡುಗು, ರಕ್ಷಣೆಗೆ ಧಾವಿಸಿದೆ. ಮಳುಗು ತಜ್ಞರು ಸೇರಿದಂತೆ ಹಲವು ಸಿಬ್ಬಂದಿಗಳು ಬಾಹ್ಯಾಕಾಶ ನೌಕೆಯನ್ನು ರಕ್ಷಣಾ ಹಡಗಿನ ಮೂಲಕ ರಕ್ಷಿಸಿದ್ದಾರೆ. ಬಳಿಕ ನೌಕೆಯ ಹ್ಯಾಚ್ ತೆಗೆದು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತರಲಾಗುತ್ತದೆ. ಕಳೆದ 9 ತಿಂಗಳು ಗುರುತ್ವಾಕರ್ಷ ಬಲವಿಲ್ಲದೆ ಕಳೆದ ಗಗನಯಾತ್ರಿಗಳು ಭೂಮಿ ಮೇಲೆ ಗುರುತ್ವಾಕರ್ಷಣೆಗೆ ಸಿಲುಕಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.