April 17, 2026

ಸೌದಿ ಅರೇಬಿಯಾದ ಸರ್ಕಾರಿ ತೈಲ ಕಂಪನಿ ಮೇಲೆ ಇರಾನ್ ಡ್ರೋನ್ ದಾಳಿ: ತೈಲ ಘಟಕ ಸ್ಥಗಿತ

0
image_editor_output_image753392387-1772446703035.jpg

ರಿಯಾದ್: ಸೌದಿ ಅರೇಬಿಯಾದ ಸರ್ಕಾರಿ ತೈಲ ಕಂಪನಿ ಸೌದಿ ಅರಾಮ್ಮೊದ ಮೇಲೆಯೇ ಇರಾನ್ ಡ್ರೋನ್ ದಾಳಿ ನಡೆಸಿದೆ.

ಸೋಮವಾರದ ಡೋನ್ ದಾಳಿಯ ನಂತರ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ಸೌದಿ ಅರಾಮ್ಮೋ ಮುಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗಲ್ಫ್ ಕೊಲ್ಲಿಯಲ್ಲಿರುವ ರಾಸ್ ತನುರಾ ಕಾಂಪ್ಲೇಕ್ಸ್ ಮಧ್ಯಪ್ರಾಚ್ಯದ ಅತಿದೊಡ್ಡ ಸಂಸ್ಕರಣಾಗಾರಗಳ ಪೈಕಿ ಒಂದಾಗಿದ್ದು ಇದು ದಿನಕ್ಕೆ 550,000 ಬ್ಯಾರೆಲ್‌ಗಳ ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಸೌದಿಯ ಕಚ್ಚಾ ತೈಲವನ್ನು ರಫ್ತು ಮಾಡುವ ಪ್ರಮುಖ ಟರ್ಮಿನಲ್ ಆಗಿಯೂ ಕೆಲಸ ಮಾಡುತ್ತದೆ.

ಡ್ರೋನ್ ದಾಳಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಘಟಕವನ್ನು ಮುಚ್ಚಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!