March 2, 2026

ಅಮೆರಿಕದ ಬಹುದೊಡ್ಡ ನೌಕಾನೆಲೆ ಇರುವುದು ಕತಾರ್ ನಲ್ಲಿ: ಎಷ್ಟು ಹೆಕ್ಟೇರ್ ವಿಸ್ತೀರ್ಣ ಗೊತ್ತೇ? ಇಲ್ಲಿ ಇಷ್ಟು ಮಂದಿ ಅಮೆರಿಕಾದ ಸೈನಿಕರಿದ್ದಾರೆ

0
image_editor_output_image-67784814-1772444880803.jpg

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿವೆ. 2024ರ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದಾದ್ಯಂತ 51 ದೇಶಗಳಲ್ಲಿ 128 ವಿದೇಶಿ ವಾಯು ನೆಲೆಗಳನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದೆ.

ಅಮೆರಿಕದ ವಾಯುನೆಲೆಗಳು ಪ್ರಮುಖ ಇಸ್ಲಾಮಿಕ್ ದೇಶಗಳಲ್ಲಿಯೂ ಇವೆ. ಕತಾರ್: ಕತಾರ್‌ನ ರಾಜಧಾನಿ ದೋಹಾದ ಹೊರವಲಯದಲ್ಲಿ ಅಮೆರಿಕದ ನೌಕಾ ನೆಲೆ ಇದೆ. 24 ಹೆಕ್ಟೇರ್ ವಿಸ್ತೀರ್ಣದ ಈ ನೆಲೆಯಲ್ಲಿ ಸುಮಾರು 10,000 ಸೈನಿಕರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಸಿಆರ್‌ಎಸ್ ವರದಿಯ ಪ್ರಕಾರ ಕತಾರ್ ಈ ವಾಯುನೆಲೆಯನ್ನು ಅಭಿವೃದ್ಧಿಪಡಿಸಲು 8 ಶತಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿದೆ. ಇತ್ತೀಚೆಗೆ ಅಮೆರಿಕ ಈ ವಾಯುನೆಲೆಯನ್ನು ಇನ್ನೂ ಹತ್ತು ವರ್ಷಗಳ ಕಾಲ ಬಳಕೆ ಮಾಡಿಕೊಳ್ಳುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ವಾಯುನೆಲೆಯಲ್ಲಿ ಕಣ್ಣಾವಲು ವಿಮಾನಗಳು, ಟ್ಯಾಂಕರ್, ಏರ್‌ಲಿಫ್ಟ್ ವಿಮಾನಗಳು, ಗ್ಲೋಬ್‌ಮಾಸ್ಟರ್, CH-130H ಹರ್ಕ್ಯುಲಸ್, ಪೇಟ್ರಿಯಾಟ್ ಕ್ಷಿಪಣಿಯ ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್‌ಗಳಿವೆ. ಇಲ್ಲಿ ಸುಮಾರು 8,000 ರಿಂದ 10,000 ಅಮೆರಿಕನ್ ಸೈನಿಕರು ಇದ್ದಾರೆ ಎಂದು ಸಿಆರ್‌ಎಸ್‌ ವರದಿ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!