ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಿಗೆ “ಬೆಸ್ಟ್ ಪ್ರಿನ್ಸಿಪಾಲ್” ಪ್ರಶಸ್ತಿ

ವಿಟ್ಲ: ಕಂಬಳಬೆಟ್ಟು ವಿನ ಜನಪ್ರಿಯ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಅವರಿಗೆ ಐಟಿ ಒಲಿಂಪಿಯಾಡ್ ಎಜುಕೇಶನ್ ಪ್ರೈ. ಲಿ. ವತಿಯಿಂದ ಬೆಸ್ಟ್ ಪ್ರಿನ್ಸಿಪಾಲ್” ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬೈನ ರಿಚ್ಮೋಂಟ್ ಕ್ಲಿಫ್, ಹರಿನಂದಿನಿ ಗಾರ್ಡನ್, ನಲ್ಲಿ ನೆರವೇರಿತು.
ಈ ಪ್ರಶಸ್ತಿಯನ್ನು ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಪೂರ್ವ ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಡಾ. ಕಿರಣ್ ಬೇಡಿ ಮತ್ತು ಒಲಿಂಪಿಕ್ ಪದಕ ವಿಜೇತೆ ಹಾಗೂ ಪದ್ಮಭೂಷಣ ಪುರಸ್ಕೃತೆ ಸೈನಾ ನೆಹ್ವಾಲ್ ನೀಡಿದರು. ಈ ಪ್ರಶಸ್ತಿಯು ಲಿಬಿನ್ ಕ್ಸೇವಿಯರ್ ಅವರ ಅದ್ಭುತ ನಾಯಕತ್ವ, ಶೈಕ್ಷಣಿಕ ಶ್ರೇಷ್ಠತೆಗೆ ಸಲ್ಲಿಸಿದ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ನೀಡಲಾಯಿತು.
ಪ್ರಶಸ್ತಿ ಪಡೆದು ಸಂತೋಷ ವ್ಯಕ್ತಪಡಿಸಿದ ಕ್ಸೇವಿಯರ್ ರವರು, ಈ ಪ್ರಶಸ್ತಿಯನ್ನು ಜನಪ್ರಿಯ ಸೆಂಟ್ರಲ್ ಶಾಲೆಯ ಸಮಸ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಅರ್ಪಿಸಿದರು. ಅವರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಈ ಸಾಧನೆಯ ಹಿಂದಿನ ಪ್ರೇರಣೆ ಎಂದು ಅವರು ಹೇಳಿದರು.
ಶಾಲೆಯ ನಿರ್ವಹಣಾ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. ಈ ಪ್ರಶಸ್ತಿ, ಶಾಲೆಯ ಶೈಕ್ಷಣಿಕ ಶ್ರೇಷ್ಠತೆಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ.