ಕೇರಳದ ಇಬ್ಬರಿಗೆ ದುಬೈ ನಲ್ಲಿ ಮರಣದಂಡನೆ ಶಿಕ್ಷೆ

ಯುಎಇ: ದುಬೈನಲ್ಲಿ ಕೇರಳದ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ಕುರಿತು ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಲ್ಲುಶಿಕ್ಷೆಗೆ ಒಳಗಾದವರನ್ನು ಮುಹಮ್ಮದ್ ರಿನಾಶ್ ಎ ಮತ್ತು ಮುರಳೀಧರನ್ ಪಿವಿ ಎಂದು ಗುರುತಿಸಲಾಗಿದೆ. ಈ ಕುರಿತು ಯುಎಇ ಸರಕಾರವು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.
ಕುಟುಂಬದವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ. ಕೊಲೆ ಪ್ರಕರಣರಲ್ಲಿ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿದೆ.
ಯುಎಇ ಪ್ರಜೆಯ ಹತ್ಯೆಯನ್ನು ಒಳಗೊಂಡ ಪ್ರಕರಣವೊಂದರಲ್ಲಿ ಕಣ್ಣೂರಿನ ರಿನಾಶ್ ಶಿಕ್ಷೆಗೊಳಗಾಗಿದ್ದಾನೆ. ಈತನು ಅಲ್ ಐನ್‌ನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹವರ್ತಿ ಭಾರತೀಯ ವಲಸಿಗರ ಹತ್ಯೆಗೆ ಮುರೂರಧರನ್‌ಗೆ ಶಿಕ್ಷೆ ವಿಧಿಸಲಾಗಿದೆ. ಮರಣದಂಡನೆಗಳ ಬಗ್ಗೆ ಯುಎಇ ಫೆಬ್ರವರಿ 28 ರಂದು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿತು, ನಂತರ ಈ ಮಿಷನ್ ಅವರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿತು. ರಾಯಭಾರ ಕಚೇರಿಯು ಇಬ್ಬರಿಗೆ ಸಾಧ್ಯವಿರುವ ಎಲ್ಲ ಕಾನ್ಸುಲರ್ ಮತ್ತು ಕಾನೂನು ನೆರವು ನೀಡಿದೆ ಎಂದು ಹೇಳಿದೆ.