March 5, 2026

ಇರಾನ್ ಮೇಲಿನ ಅಮೆರಿಕದ ಮಿಲಿಟರಿ ದಾಳಿಗೆ ಸ್ಪೇನ್ ನೆಲೆಗಳನ್ನು ಬಳಸಲು ಅನುಮತಿ ನೀಡಿಲ್ಲ: ಸ್ಪೇನ್ ಸ್ಪಷ್ಟನೆ

0
image_editor_output_image2081920957-1772668321094.jpg

ಮ್ಯಾಡ್ರಿಡ್: ಇರಾನ್ ಮೇಲಿನ ಅಮೆರಿಕದ ಮಿಲಿಟರಿ ದಾಳಿಗೆ ಸ್ಪೇನ್ ಸಹಕರಿಸಲು ಒಪ್ಪಿಕೊಂಡಿದೆ ಎಂಬ ಶ್ವೇತಭವನದ ಹೇಳಿಕೆಯನ್ನು ಸ್ಪೇನ್ ಸರ್ಕಾರ ತಳ್ಳಿಹಾಕಿದೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳಿಗೆ ತನ್ನ ನೆಲೆಗಳನ್ನು ಬಳಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಗುರುವಾರ ಮುಂಜಾನೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಾತನಾಡಿ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮ್ಯಾಡ್ರಿಡ್ ಜೊತೆಗಿನ ವ್ಯಾಪಾರವನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳಿಗೆ ಸ್ಪೇನ್‌ ಸಹಕರಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!