ಬೈನ್ ಹ್ಯಾಮರೇಜ್ ರಕ್ತಸ್ರಾವದಿಂದ ವಿದ್ಯಾರ್ಥಿ ಸಾವು
ಹುಣಸೂರು; ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಯೊರ್ವ ಮೆದುಳಿನ (ಬೈನ್ ಹ್ಯಾಮರೇಜ್) ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ನಾಗಾಪುರ ಆಶ್ರಮ ಶಾಲೆಯಲ್ಲಿ ನಡೆದಿದೆ.
ಮೈಸೂರು ಹುಣಸೂರು ತಾಲೂಕಿನ ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಆಶ್ರಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸೂರ್ಯ (14) ಸಾವನ್ನಪ್ಪಿರುವಾತ.
ಈತ ತಾಲೂಕಿನ ಹನಗೋಡಿಗೆ ಸಮೀಪದ ಕಲ್ಲೂರಪ್ಪನ ಬೆಟ್ಟದ ಬಳಿಯ ಶಂಕರಪುರ ಹಾಡಿಯ ಡೋಂಗ್ರಿ ಗೆರಾಸಿಯಾ ಸಮುದಾಯದ ಜಗನ್ನಾಥ್-ಲಕ್ಷ್ಮಮ್ಮ ದಂಪತಿ ಪುತ್ರ.





