February 3, 2026

ಅತ್ಯಾಚಾರ ಪ್ರಕರಣದ ತನಿಖಾಧಿಕಾರಿಗಳನ್ನು ಕೊಲ್ಲಲು ನಟ ದಿಲೀಪ್ ಸಂಚು ರೂಪಿಸಿದ್ದರು:
ಕ್ರೈಂ ಬ್ರಾಂಚ್ ಮಾಹಿತಿ ಬಹಿರಂಗ

0
Screenshot_2022-01-21-10-48-01-54_680d03679600f7af0b4c700c6b270fe7.jpg

ಕೊಚ್ಚಿ: 2017 ರಲ್ಲಿ ಖ್ಯಾತ ನಟಿಯನ್ನು ಅಪಹರಿಸಿ ಅತ್ಯಾಚಾರ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ತನಿಖಾಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಅಪರಾಧ ವಿಭಾಗವು ಶುಕ್ರವಾರ ನಟ ದಿಲೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಅವಕಾಶ ಕೇಳಿದೆ.

ನಟಿಯ ಅಪಹರಣ ಕೃತ್ಯದಲ್ಲಿ ದಿಲೀಪ್ ಮತ್ತು ಇತರ ಐವರು ಭಾಗಿಯಾಗಿದ್ದಾರೆ, ಗಂಭೀರ ಅಪರಾಧದ ಆರೋಪ ಎದುರಿಸುತ್ತಿರುವವರೊಬ್ಬರು ತನಿಖಾಧಿಕಾರಿಗಳ ಪ್ರಾಣಕ್ಕೇ ಸಂಚಕಾರ ಎಸಗುವ ಕ್ರಿಮಿನಲ್ ಸಂಚು ರೂಪಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಪರಾಧ ವಿಭಾಗ(Crime Branch) ತನ್ನ ವರದಿ ಸಲ್ಲಿಕೆಯಲ್ಲಿ ಹೇಳಿದೆ. ದಿಲೀಪ್ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಹಾಗಾಗಿ ಆರೋಪದ ಸತ್ಯಾಸತ್ಯತೆ ಹೊರಬರಲು ಅವರ ಕಸ್ಟಡಿ ವಿಚಾರಣೆ ಅಗತ್ಯ ಎಂದು ಪ್ರತಿಪಾದಿಸಿದೆ.

ಪ್ರಕರಣದ ತನಿಖೆ ಭರದಿಂದ ಸಾಗುತ್ತಿದ್ದು, ತನಿಖೆಯ ಆರಂಭಿಕ ಹಂತದಲ್ಲಿಯೇ ಕೆಲವು ನಿರ್ಣಾಯಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಅರ್ಜಿದಾರರು ತಮ್ಮ ಪೂರ್ವಾಪರಗಳನ್ನು ಪರಿಗಣಿಸಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿರುವುದಿಲ್ಲ. ಅವರಿಗೆ ಜಾಮೀನು ನೀಡಿದರೆ, ಪ್ರಕರಣದ ಸಂಪೂರ್ಣ ತನಿಖೆಯನ್ನು ಹಾಳು ಮಾಡಬಹುದು ಎಂದು ಎರ್ನಾಕುಲಂನ ಅಪರಾಧ ವಿಭಾಗದ ಪೊಲೀಸ್ ಅಧೀಕ್ಷಕ ಎಂ ಪಿ ಮೋಹನಚಂದ್ರನ್ ಅವರು ದಿಲೀಪ್ ಮತ್ತು ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯ ಇಂದು ವಿಚಾರಣೆಯನ್ನು ಮುಂದುವರಿಸಲಿದೆ.

ಕಾನೂನಿನ ಕಪಿಮುಷ್ಠಿಯಿಂದ ಹೊರಬರಲು ದಿಲೀಪ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಟಿಯ ಅಪಹರಣ ಪ್ರಕರಣದಲ್ಲಿ 20 ಪ್ರಾಸಿಕ್ಯೂಷನ್ ಸಾಕ್ಷಿಗಳು ದಿಲೀಪ್‌ಗೆ ಸಹಾಯ ಮಾಡುವ ಪ್ರಯತ್ನದಲ್ಲಿ ತಮ್ಮ ಹೇಳಿಕೆಗಳನ್ನು ಬದಲಿಸಿದ್ದಾರೆ. ಆ ದಿಸೆಯಲ್ಲಿ ವಿಷಯಗಳನ್ನು ನಿರ್ವಹಿಸುವಲ್ಲಿ ದಿಲೀಪ್ ಮತ್ತು ಆತನ ವ್ಯಕ್ತಿಗಳ ಸ್ಪಷ್ಟ ಪಾತ್ರ ಬಹಿರಂಗವಾಗಿದ್ದು, ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಕ್ಕಾಗಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬಂಧನವನ್ನೂ ಮಾಡಲಾಗಿದೆ ಎಂದು ಅಪರಾಧ ವಿಭಾಗ ನ್ಯಾಯಾಲಯಕ್ಕೆ ಹೇಳಿದೆ.

Leave a Reply

Your email address will not be published. Required fields are marked *

error: Content is protected !!