ಉದ್ದೇಶಪೂರ್ವಕವಾಗಿ ಕೋವಿಡ್ 19 ಸೋಂಕು ತಗುಲಿಸಿಕೊಂಡಿದ್ದ ಜಾನಪದ ಗಾಯಕಿ ಮೃತ್ಯು
ಜೆಕ್: ಉದ್ದೇಶಪೂರ್ವಕವಾಗಿ ಕೋವಿಡ್ 19 ಸೋಂಕು ತಗುಲಿಸಿಕೊಂಡಿದ್ದ ಜೆಕ್ ಗಣರಾಜ್ಯದ ಜಾನಪದ ಗಾಯಕಿ ಹನಾ ಹೊರ್ಕಾ ನಿಧನರಾಗಿದ್ದಾರೆ,
ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಹನ ಹೊರ್ಕಾ, ಕೆಲ ದಿನಗಳ ಹಿಂದೆ, ನನಗೆ ಕೋವಿಡ್ ಸೋಂಕು ತಗುಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದಾಗಿ ನಾಲ್ಕೈದು ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.




