January 31, 2026

ಅಬುಧಾಬಿ: ಭೀಕರ ರಸ್ತೆ ಅಪಘಾತ: ಕೇರಳ ಮೂಲದ ಒಂದೇ ಕುಟುಂಬದ ಮೂವರು ಸಹೋದರರು ಸೇರಿ 4 ಮಂದಿ ಮೃತ್ಯು

0
image_editor_output_image-1842305774-1767668846418.jpg

ಅಬುಧಾಬಿ: ಶನಿವಾರ ಮುಂಜಾನೆ ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಕ್ಕಳು ಹಾಗೂ ಮನೆ ಸಹಾಯಕಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಒಡಹುಟ್ಟಿದವರಾದ ಅವರೆಲ್ಲರೂ ತಮ್ಮ ಕುಟುಂಬದ ಮನೆ ಸಹಾಯಕಿಯೊಂದಿಗೆ ವಾಹನದಲ್ಲಿ ಪ್ರಯಾಣಿಸುವಾಗ ಅಬುಧಾಬಿ-ದುಬೈ ಹೆದ್ದಾರಿಯ ಶಹಾಮಾದಲ್ಲಿ ಈ ರಸ್ತೆ ಅಪಘಾತದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಆಶಾಸ್ (14), ಅಮ್ಮರ್ (12), ಆಯಾಶ್ (5), ಮತ್ತು ಬುಶಾರಾ (48) ಎಂದು ಗುರುತಿಸಲಾಗಿದೆ.

ತಕ್ಷಣವೇ ತುರ್ತು ಸೇವೆಗಳಿಗೆ ಮಾಹಿತಿ ನೀಡಿದರೂ, ಅವರೆಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

ಕೇರಳ ಮೂಲದ ಕುಟುಂಬವೊಂದಕ್ಕೆ ಸೇರಿದ ಈ ಮೂವರು ಮಕ್ಕಳು ರಾಸ್ ಅಲ್ ಖೈಮಾ ದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದಾಗ ಅವರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು ಎಂದು ಹೇಳಲಾಗಿದೆ.

ರಸ್ತೆ ಅಪಘಾತಕ್ಕೆ ಕಾರಣವೇನು ಎಂಬ ಕುರಿತು ಪೊಲೀಸರು ಯಾವುದೇ ಮಾಹಿತಿಯನ್ನು ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!