ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ l
ಕಲಬುರಗಿ: ದಾಯಾದಿಗಳ ಕಲಹವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವರಾಜ್ ತಳವಾರ (34) ಕೊಲೆಯಾದ ವ್ಯಕ್ತಿ.
ಶುಕ್ರವಾರ (ಜ.30) ತಡರಾತ್ರಿ ಸಹೋದರ ಸಂಬಂಧಿಗಳಾದ ಬಸವರಾಜ್ ತಳವಾರ್ ಮತ್ತು ಘಳೇಶ್ ನಡುವೆ ಗಲಾಟೆ ನಡೆದಿದೆ. ಜಮೀನು ವಿಚಾರದಲ್ಲಿ ಶುರುವಾದ ಗಲಾಟೆ ವಿಕೋಪಕ್ಕೆ ತೆರಳಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




