ನಾಲ್ಕು ಕಾರ್ಮಿಕರು ಲೇಬರ್ ಶೆಡ್‌ನಲ್ಲಿ ಅನುಮಾನಸ್ಪದವಾಗಿ ಸಾವು
ಬೆಂಗಳೂರು: ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಕಾರ್ಮಿಕರು ಲೇಬರ್ ಶೆಡ್‌ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮುತ್ಸಂದ ಗ್ರಾಮದಲ್ಲಿ ನಡೆದಿದೆ.
ಅಸ್ಸಾಂ ಮೂಲದ, ಜಯಂತ್ ಸಿಂಧೆ(25), ನೀರೇಂದ್ರನಾಥ್(24), ಡಾಕ್ಟರ್ ಟೈಡ್(25) ಮತ್ತು ಧನಂಜತ್ ಟೈಡ್(20) ಮೃತಪಟ್ಟ ಕಾರ್ಮಿಕರು.
ಇವರು ರಾತ್ರಿ ವೇಳೆ ಶೆಡ್‌ನ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಅಡುಗೆ ಮಾಡಿದ್ದರು ಎನ್ನಲಾಗಿದೆ. ಅದರ ಪರಿಣಾಮ ಮುಂಜಾನೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೂಲಿಬೆಲೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.




