ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡ ಕಾರು: ಮೂವರು ಸಜೀವ ದಹನ
ಗುಜುರಾತ್: ಕಾರೊಂದು ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸುಟ್ಟು ಕರಕಲಾಗಿರುವ ಘಟನೆ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ನಡೆದಿದೆ.
ಗೊಂಡಾಲ್ – ಅಟ್ಟೋಟ್ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಕಾರು ಛೋಟಾ ಉದೇಪುರದಿಂದ ಗೊಂಡಾಲ್ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಕಾರು ಸಣ್ಣ ಹೊಳೆಯೊಂದರ ಮೇಲಿನ 8 ಅಡಿ ಎತ್ತರದ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ, ಕೆಳಗೆ ಉರುಳಿದೆ. ಕಾರು ಬಿದ್ದ ತಕ್ಷಣ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದವರು ಒಳಗೆ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.




