ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ: ಶಿಕ್ಷಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು
ವಿಟ್ಲ: ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಮಗುವಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಎಂಬವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ದೇಶಪೂರ್ವಕವಾಗಿ ಯಾವುದೇ ಸಕಾರಣವಿಲ್ಲದೆ ನನ್ನ ಮಗುವಿನ ಕೈಗೆ ಗಂಭೀರವಾಗಿ ಬೆತ್ತದಿಂದ ಹೊಡೆದಂತ ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಇಸ್ತಿಕಾರ್ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿ ವಿನಂತಿಸಿಕೊಂಡಿದ್ದಾರೆ.
ಮಗು ಎಂದಿನಂತೆ ಶಾಲೆಗೆ ಹೋಗಿದ್ದು ಆ ಸಂದರ್ಭದಲ್ಲಿ ಶಾಲೆಯಿಂದ ಒಂದು ಕರೆ ಬಂದಿರುತ್ತದೆ ಮಧ್ಯಾಹ್ನ ಸುಮಾರು 2 ಗಂಟೆಗೆ ನಿಮ್ಮ ಮಗಳು ನಮಾಜ್ ಮಾಡುವ ಕೊಠಡಿಯಲ್ಲಿ ಇತರೆ ಮಕ್ಕಳಿಗೆ ತೊಂದರೆ ಮಾಡುತ್ತಿದ್ದಾಳೆ ಹಾಗೂ ಈ ವಿಚಾರವಾಗಿ ಬೈದಾಗ ಹಾಗೂ ಅವಳು ಅಲ್ಲಿಯೇ ಮೂತ್ರ ಮಾಡಿಕೊಂಡಿರುತ್ತಾಳೆ ಮತ್ತು ನೀವು ಬಂದು ಮಗುವನ್ನು ಕರೆದುಕೊಂಡು ಹೋಗಿ ಎಂದು ಶಾಲೆಯ ಕಚೇರಿಯಿಂದ ಕರೆ ಬಂದಾಗ ಆ ಸಮಯ ಮನೆಯಲ್ಲಿ ಯಾರೂ ಇರದ ಕಾರಣ ಮಗುವನ್ನು ನೀವೇ ಆಟೋದಲ್ಲಿ ಕಳಿಸಿ ಎಂದು ಹೆತ್ತವರು ತಿಳಿಸಿದ್ದಾರೆ.
ಮನೆಗೆ ಬಂದ ಮಗಳು ಶಾಲೆಯಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಪಾಠ ಮಾಡುವ ಅಧ್ಯಾಪಕರಾದ ಇಸ್ತಿಕಾರ್ ಎಂಬವರು ನನಗೆ ಕೈಗೆ ಬೆತ್ತದಿಂದ ಬಲವಾಗಿ ಗಂಭೀರವಾಗಿ ಹಲ್ಲೆ ಮಾಡಿದ್ದು, ಹಲ್ಲೆ ಮಾಡುವ ಸಂದರ್ಭ ನಾನು ಹೆದರಿ ಮೂತ್ರ ಮಾಡಿಕೊಂಡಿರುತ್ತೇನೆ ಎಂದು ಹೇಳಿದ ಮಗುವಿನ ಹೇಳಿಕೆ ಪ್ರಕಾರ ಹೆತ್ತವರು ಶಾಲೆಯ ಶಿಕ್ಷಕ ಇಸ್ತಿಕಾರನಿಗೆ ಕರೆ ಮಾಡಿದಾಗ ನಾನು ಹಲ್ಲೆ ನಡೆಸಿದ್ದು ಸರಿ ಎಂಬಂತೆ ಅವರು ಉಡಾಫೆ ಉತ್ತರವನ್ನು ನೀಡಿದ್ದು, ಹೆತ್ತವರಿಗೂ ಮಗಳನ್ನು ಮತ್ತೆ ಶಾಲೆಗೆ ಕಳಿಸಲು ಭಯವಾಗಿದೆ. ಮಗಳ ಶೈಕ್ಷಣಿಕ ಮುಂದುವರಿಕೆಯ ಬಗ್ಗೆ ಅವಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ಮತ್ತು ವಿನಾಃ ಕಾರಣ ಗಂಭೀರವಾಗಿ ಹಲ್ಲೆ ನಡೆಸಿದ ಮುಖ್ಯ ಶಿಕ್ಷಕನ ವಿರುದ್ಧ ಪೊಲೀಸರು, ಮತ್ತು ಶಿಶು ಅಭಿವೃದ್ಧಿ ಯೋಜನಾ ಕಛೇರಿಗೂ ದೂರು ನೀಡಿದ್ದಾರೆ.




