January 31, 2026

ವಿಂಗ್ ಕಮಾಂಡರ್ ಅಭಿನಂದನ್ ಅವರಂತೆ ಮೀಸೆ ಬೆಳೆಸಿದ್ದಕ್ಕಾಗಿ ಪೊಲೀಸ್ ಪೇದೆ ಅಮಾನತು

0
WhatsApp_Image_2022_01_09_at_1_55_23_PM.jpeg

ಭೋಪಾಲ್: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಮೀಸೆ ಬೆಳೆಸಿದ್ದಕ್ಕಾಗಿ ಮಧ್ಯಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ರಾಕೇಶ್ ರಾಣಾ ಅಮಾನತಾದ ಕಾನ್ಸ್​​ಟೇಬಲ್. ಕಾನ್ಸ್‌ಟೇಬಲ್ ರಾಕೇಶ್ ರಾಣಾ ಅವರನ್ನು ರಾಜ್ಯ ಪೊಲೀಸ್‌ನ ಸಾಗಾಟ ಘಟಕಕ್ಕೆ ಚಾಲಕನನ್ನಾಗಿ ನೇಮಕ ಮಾಡಲಾಗಿತ್ತು.

ಅವರಿಗೆ ಮೀಸೆ ಕತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ ಅವರು ಆದೇಶ ಪಾಲಿಸಲು ವಿಫಲರಾಗಿದ್ದರು. ನಂತರ ಅವರನ್ನು ಕೂಡಲೇ ಆದೇಶಕ್ಕೆ ಬರುವಂತೆ ಅಮಾನತುಗೊಳಿಸಲಾಗಿದೆ.

ರಾಣಾ ಅವರ ಮೀಸೆ ಇತರ ಉದ್ಯೋಗಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತದೆ ಎಂದು ಆದೇಶ ಹೇಳಿದೆ. ಆದರೆ ಮೀಸೆ ಸ್ವಗೌರವದ ವಿಷಯ ಎಂದು ಪ್ರತಿಪಾದಿಸಿರುವ ರಾಣಾ, ಮೀಸೆ ಕತ್ತರಿಸಲು ನಿರಾಕರಿಸಿದ್ದಾರೆ. “ನಾನು ರಜಪೂತ ಹಾಗೂ ನನ್ನ ಮೀಸೆ ನನಗೆ ಹೆಮ್ಮೆ” ಎಂದು ಅವರು ಹೇಳಿದ್ದಾರೆ.

ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸದೇ ಇರುವ ಕಾರಣಕ್ಕೆ ರಾಣಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಐಜಿ ಪ್ರಶಾಂತ್ ಶರ್ಮಾ ತನ್ನ ಆದೇಶದಲ್ಲಿ ಹೇಳಿದ್ದಾರೆ. ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ ಲೆಟರ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!