January 31, 2026

ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಲಂಡನ್ ಕೋರ್ಟ್ ಆದೇಶ

0
images-7.jpeg

ಮಂಗಳೂರು: ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಲಂಡನ್ ಕೋರ್ಟ್ ಸೂಚಿಸಿದೆ. ಇದರೊಂದಿಗೆ ದಿವಾಳಿಯೆದ್ದಿರುವ ಮಂಗಳೂರಿನ ಬಿ ಆರ್ ಶೆಟ್ಟಿಗೆ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾರ್ಕ್ಲೇಸ್ ಕಂಪನಿ ಪರ ಆದೇಶ ನೀಡಿತ್ತು.

ಭಾರತದ ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿ ತಮ್ಮ ಕಂಪನಿಯ ಜೊತೆ 2020ರಲ್ಲಿ ಮಾಡಿಕೊಂಡಿದ್ದ ವಿದೇಶ ವಿನಿಮಯ ಬಿಸಿನೆಸ್ ಅಗ್ರಿಮೆಂಟ್ ಪ್ರಕಾರ ಹಣ ಪಾವತಿಸುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ಅವರಿಂದ ಹಣ ಕೊಡಿಸಬೇಕು ಎಂದು ಬಾರ್ಕ್ಲೇಸ್ ಕಂಪನಿ ಲಂಡನ್ ಕೋರ್ಟ್ ಮೊರೆ ಹೋಗಿತ್ತು. ಮನವಿಯನ್ನು ಪುರಸ್ಕರಿಸಿರುವ ಲಂಡನ್ ಕೋರ್ಟ್ ಇದೀಗ ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿಗೆ 131 ದಶಲಕ್ಷ ಡಾಲರ್ ಕಟ್ಟುವಂತೆ ಸೂಚಿಸಿದೆ.

ಉದ್ಯಮಿ ಬಿ ಆರ್ ಶೆಟ್ಟಿ ವಿರುದ್ಧ ಬಾರ್ಕ್ಲೇಸ್ ಕಂಪನಿ ಕಾನೂನು ಸಮರ ಗೆದ್ದಿದ್ದು ಶೆಟ್ಟಿ 131 ದಶಲಕ್ಷ ಡಾಲರ್ ಪಾವತಿ ಮಾಡಬೇಕಿದೆ. ಯುಕೆ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಉದ್ಯಮಿ ಬಿ ಆರ್ ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರ ಸಂಸ್ಥೆಯು ಆರ್ಥಿಕವಾಗಿ ಪರದಾಡುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದರು. ಹಾಗಾಗಿ ತಮ್ಮ ಕಕ್ಷಿದಾರ ಸಂಸ್ಥೆಗೆ ಕಾನೂನಾತ್ಮಕವಾಗಿ ವಿನಾಯಿತಿ ನೀಡಬೇಕು ಎಂದು ಮೊರೆಯಿಟ್ಟಿದ್ದರು. ಆದರೆ ಕೋರ್ಟ್ ಶೆಟ್ಟಿ ವಕೀಲರ ಮನವಿಯನ್ನು ಇದೀಗ ತಿರಸ್ಕರಿಸಿದೆ.

ಮಂಗಳೂರಿನ ಉದ್ಯಮಿ, 79 ವರ್ಷದ ಬಿ ಆರ್​ ಶೆಟ್ಟಿ ಆರ್ಥಿಕ ದಿವಾಳಿತನಕ್ಕೆ ಗುರಿಯಾಗಿದ್ದು, ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರು ಸದ್ಯ ಮಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಇರುವ ಬಿ ಆರ್​ ಶೆಟ್ಟಿಯ ಖಾತೆಗಳನ್ನು, ಆಸ್ತಿಪಾಸ್ತಿಗಳನ್ನು ಸ್ಥಗಿತಗೊಳಿಸುವಂತೆ ಬಾರ್ಕ್ಲೇಸ್ ಕಂಪನಿ ವಕೀಲರು ಕೋರ್ಟ್​ಗೆ ಮೊರೆಯಿಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!