ತಲೆಗೆ ಸೈಜುಗಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ
ಕಲಬುರಗಿ: ವ್ಯಕ್ತಿಯೋರ್ವನ ತಲೆಗೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮ ಸಮೀಪದ ಯರಗಲ್ ರಸ್ತೆಯ ಅಬ್ಬಾಸ ಅಲಿ ದರ್ಗಾ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಸುಮಾರು 45 ರಿಂದ 50 ವಯಸ್ಸಿನ ವ್ಯಕ್ತಿಯೆಂದು ಅಂದಾಜಿಸಲಾಗಿದ್ದು, ಆರೋಪಿಗಳು ದೊಡ್ಡ ಕಲ್ಲನ್ನು ನೇರವಾಗಿ ಮುಖ ಮತ್ತು ತಲೆಯ ಮೇಲೆ ಎಸೆದಿರುವ ಕಾರಣ ತಲೆ ಅಪ್ಪಚ್ಚಿಯಾಗಿದೆ.
ಮೃತ ವ್ಯಕ್ತಿಯ ಇಡೀ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಚಿತ್ತಾಪುರ ಮಾರ್ಗದ ರಸ್ತೆ ಬದಿಯ ಪೊದೆಯಲ್ಲಿ ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿದೆ.




