ವಿಟ್ಲ: ಫೇಸ್ಬುಕ್ ನಲ್ಲಿ ಪ್ರಚೋದನೆಕಾರಿ ಹೇಳಿಕೆ:
ವಿಷ್ಣು ಪ್ರಸಾದ್ ನಿಡ್ಡಾಜೆ ವಿರುದ್ದ ಪಾಪ್ಯುಲರ್ ಫ್ರಂಟ್ ನಿಂದ ದೂರು ದಾಖಲು
ವಿಟ್ಲ: ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತನು ವಿಟ್ಲದ ಸಾಲೆತ್ತೂರ್ ಎಂಬಲ್ಲಿ ನಡೆದ ಘಟನೆಯನ್ನು ಉಲ್ಲೆಖಿಸುತ್ತಾ, ಗೋದ್ರಾ ಷಡ್ಯಂತ್ರದ ನಂತರ ನಡೆದ ಗುಜರಾತ್ ಗಲಭೆ ಮಂಗಳೂರಿನಲ್ಲಿ ನಡೆಸಬೇಕು ಆಗಷ್ಟೇ ಮುಸ್ಲಿಮರು ಸುಮ್ಮನಾಗುತ್ತಾರೆ. ಗುಜರಾತ್ ಗಲಭೆ ಯಾವಾಗ ಹೇಗೆ ನಡೆಯಿತೆಂದು ಮುಸ್ಲಿಮರು ಯೋಚಿಸುದು ಒಳಿತು ಎಂದು ಹಾಗು ಕೋಮುದ್ವೆಷ ಹರಡುವ ಸಂದೇಶ ನೀಡಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಗಲಭೆಗೆ ನಡೆಸಲು ಕುಮ್ಮಕ್ಕು ನೀಡಿರುತ್ತಾನೆ. ಆದುದರಿಂದ ಆರೋಪಿಯನ್ನು ಕಾನೂನಿನ ಪ್ರಕಾರ ಅತಿ ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ವತಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದರು.


