October 1, 2026

ದುಬೈ-ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ  ಭಾರತೀಯ ಪೈಲಟ್‌

0
image_editor_output_image1543804777-1790858514481

ಟೆಲ್ ಅವಿವ್: ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ‘ಫ್ಲೈದುಬೈ’ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ತೀವ್ರ ಘರ್ಷಣೆ  ಪ್ರಯತ್ನವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಮ್ಮ ಪ್ರಾಣದ ಹದಗೆಟ್ಟ ಸ್ಥಿತಿಯಲ್ಲೂ ಸಾಹಸ ಮೆರೆದು ತಡೆದಿದ್ದಾರೆ.

ಸಹ-ಪೈಲಟ್‌ನ ಅಪಾಯಕಾರಿ ಯತ್ನವನ್ನು ಧೈರ್ಯವಾಗಿ ಎದುರಿಸಿದ ಕ್ಯಾಪ್ಟನ್ ಮಚ್ಚಾರ್, ವಿಮಾನದಲ್ಲಿದ್ದ 180 ಪ್ರಯಾಣಿಕರ ಜೀವ ಕಾಪಾಡಿ ನಿಜವಾದ ‘ಹೀರೋ’ ಎನಿಸಿಕೊಂಡಿದ್ದಾರೆ.

 

ದುಬೈ-ಟೆಲ್ ಅವಿವ್ ವಿಮಾನ ಹಾರಾಟದ ವೇಳೆಯಲ್ಲಿ ಸಹ-ಪೈಲಟ್ ವಿಮಾನದ ತಾಂತ್ರಿಕ ವ್ಯವಸ್ಥೆಗಳನ್ನು ಹಾಳುಮಾಡಲು (ವಿಧ್ವಂಸಕ ಕೃತ್ಯ ನಡೆಸಲು) ಮುಂದಾಗಿದ್ದನು. ಇದನ್ನು ಗಮನಿಸಿದ ವಿಮಾನದ ಮುಖ್ಯ ಕಮಾಂಡರ್, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಕ್ಷಣವೇ ಆತನನ್ನು ತಡೆದಿದ್ದಾರೆ.

ಈ ವೇಳೆ ಸಹ-ಪೈಲಟ್ ಚಾಕುವಿನಿಂದ ಹಲ್ಲೆ ನಡೆಸಿದ್ದು, ಕ್ಯಾಪ್ಟನ್ ಮಚ್ಚಾರ್ ತೀವ್ರಗಾಯಗೊಂಡಿದ್ದರು. ದೇಹದ ಮೇಲಿನ ಗಾಯಗಳಿಂದಾಗಿ ಮಾತನಾಡಲು ಪರದಾಡುತ್ತಿದ್ದರೂ, ಅವರು ಸಹ-ಪೈಲಟ್ ನಿಯಂತ್ರಣ ಕಳೆದುಕೊಳ್ಳದಂತೆ ಪ್ರತಿರೋಧ ಒಡ್ಡಿದರು. ಆರಂಭದಲ್ಲಿ ಈ ಘಟನೆ ‘ಹೈಜಾಕ್’ ಎಂಬ ಆತಂಕವನ್ನು ಹುಟ್ಟುಹಾಕಿತ್ತಾದರೂ, ಶೀಘ್ರದಲ್ಲೇ ಆ ಸಾಧ್ಯತೆಯನ್ನು ತಳ್ಳಿಹಾಕಲಾಯಿತು. ಬಳಿಕ ವಿಮಾನದಲ್ಲಿದ್ದ ಇತರ ಪೈಲಟ್‌ಗಳು ಕಾಕ್‌ಪಿಟ್‌ನ ನಿಯಂತ್ರಣ ತೆಗೆದುಕೊಂಡು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಪ್ರಯಾಣಿಕರು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಕ್ಯಾಪ್ಟನ್ ಮಚ್ಚಾರ್ ಅವರನ್ನು ‘ಹೀರೋ’ ಎಂದು ಜೈಕಾರ ಹಾಕಿ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!