October 1, 2026

ಮಂಗಳೂರು ಕಾರಾಗೃಹದಲ್ಲಿ ನಡೆದ  ಮಾಡೂರು ಯುಸೂಫ್  ಹತ್ಯೆ ಪ್ರಕರಣ:  5 ಆರೋಪಿಗಳಿಗೆ  ಜೀವಾವಧಿ ಶಿಕ್ಷೆ  ಪ್ರಕಟ

0
image_editor_output_image-2102091288-1790618921483

ಮಂಗಳೂರು ಕಾರಾಗೃಹದಲ್ಲಿ ನಡೆದ  ಮಾಡೂರು ಯುಸೂಫ್  ಹತ್ಯೆ ಪ್ರಕರಣ:  5 ಆರೋಪಿಗಳಿಗೆ  ಜೀವಾವಧಿ ಶಿಕ್ಷೆ  ಪ್ರಕಟ


ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ  ದಿನಾಂಕ:02-11-2015 ರಂದು ಮಾಡೂರು ಯುಸೂಫ್ ಎಂಬುವನನ್ನು ಹತ್ಯೆ ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ಸದ್ರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ 1) ಲಿತೇಶ್ ಪೂಜಾರಿ @ ಲಿತ್ತು ತಂದೆ: ರಘುನಾಥ ಸನಿಲ್ ವಿಳಾಸ:  ಪೂಪಾಡಿಕಲ್ಲು, ಕೋಟೆ, ಸೂರಿಂಜೆ, ಕಾಟಿಪಳ್ಳ ಅಂಚೆ, ಸುರತ್ಕಲ್, ಮಂಗಳೂರು ತಾಲೂಕು. 2) ಶೋಭರಾಜ್ @ ಶೋಭಿ ತಂದೆ: ತಿಮ್ಮಪ್ಪ ಪೂಜಾರಿ ವಿಳಾಸ: “ಕೋಟ್ಯಾನ್ ನಿವಾಸ” ವಿಜಯನಗರ, ಮಧ್ಯ, ಸುರತ್ಕಲ್, ಮಂಗಳೂರು 3) ಯುವರಾಜ್ ತಂದೆ:ಭಾಸ್ಕರ ವಿಳಾಸ: “ವೈಷ್ಣವಿ ನಿಲಯ” ರಾಜೀವ ನಗರ, ಶಿಬರೂರು, ಕಾಟಿಪಳ್ಳ ಅಂಚೆ, ಸುರತ್ಕಲ್, ಮಂಗಳೂರು. 4) ಪ್ರದೀಪ್ ತಂದೆ:ನಾರಾಯಣ ಪೂಜಾರಿ ವಿಳಾಸ:ಶಾಲೆ ಮಜಲ್ ಕಂಪೌಂಡ್, ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಹತ್ತಿರ, ಉಳಾಯಿಬೆಟ್ಟು, ಮಂಗಳೂರು ತಾಲೂಕು. 5) ಉಮೇಶ್ ಕೊಂಬಾರ್ @ ಉಮೇಶ್ ಕುಂಬಾರ ತಂದೆ:ದಿ| ಶೇಷಪ್ಪ ಗೌಡ ವಿಳಾಸ:ಬೆಟ್ಟು ಮುಖಿ ಮನೆ, ಬಾಳುಗೋಡು ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು. ದ.ಕ. ಜಿಲ್ಲೆ. ರವರಿಗೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ‌ ಎನ್ ರವರು ಪ್ರಕರಣದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿ, ಈ ದಿನ ದಿನಾಂಕ 01-10-2026 ರಂದು ಐವರು ಆರೋಪಿಗಳಿಗೆ  *ಜೀವಾವಧಿ  ಶಿಕ್ಷೆ ಹಾಗೂ 76,000  ರೂ ದಂಡ ವಿಧಿಸಿ* ಶಿಕ್ಷೆ ಪ್ರಕಟ ಮಾಡಿರುತ್ತಾರೆ.

ಸದ್ರಿ ಪ್ರಕರಣದಲ್ಲಿ  ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಬಿ.ಮೋಹನ್ ಕುಮಾರ್ ರವರು ಸರಕಾರದ ಪರವಾಗಿ ವಾದಿಸಿರುತ್ತಾರೆ. ಸದ್ರಿ ಪ್ರಕರಣದ ತನಿಖೆಯನ್ನು ಅಂದಿನ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಶ್ರೀ ತಿಲಕ್ ಚಂದ್ರ ರವರು  ನಡೆಸಿ  ಆರೋಪಿಗಳ ವಿರುದ್ದ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!