ಇಂದಿನಿಂದ ಬ್ಯಾಂಕ್ ಎಟಿಎಂ ಶುಲ್ಕ ಏರಿಕೆ
ನವದೆಹಲಿ: ಕಳೆದೆರಡು ವರ್ಷದಿಂದ ಕೊರೊನಾ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಹೊಸ ವರ್ಷದಲ್ಲೂ ಮತ್ತೆ ಶುಲ್ಕಗಳ ಏರಿಕೆ ಬರೆ ಎಳೆದಿದೆ.
ಇಂದಿನಿಂದ ಬ್ಯಾಂಕ್ ಎಟಿಎಂ ಶುಲ್ಕ ಸಹ ಏರಿಕೆ ಮಾಡಲು ಆರ್ ಬಿ ಐ ಈ ಹಿಂದೆಯೇ ನಿರ್ಧರಿಸಿದ್ದು, ಹೊಸ ನಿಯಮಗಳು ಇಂದಿನಿಂದ ಜಾರಿಯಾಗಲಿದೆ.
ಆರ್ ಬಿ ಐ ಹೊಸ ಮಾರ್ಗಸೂಚಿಯ ಅನ್ವಯದಂತೆ ಇಂದಿನಿಂದ ಬ್ಯಾಂಕ್ ಎಟಿಎಂ ಶುಲ್ಕ ಏರಿಕೆಯಾಗಲಿದೆ. ಗ್ರಾಹಕರು ಮಾಸಿಕ ಉಚಿತ ಮಿತಿ ಮುಗಿದ ಬಳಿಕ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ. ಮೆಟ್ರೋ ನಗರಗಳಲ್ಲಿ ಮೂರು ಉಚಿತ ವಹಿವಾಟು ಹಾಗೂ ಇತರೆಡೆ 5 ಬಾರಿ ಗ್ರಾಹಕರು ಉಚಿತ ವಹಿವಾಟು ನಡೆಸಬಹುದಿದೆ. ಇದಾದ ಬಳಿಕ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಈ ಶುಲ್ಕ 20 ರೂಪಾಯಿಯಾಗಿತ್ತು. ಇಂದಿನಿಂದ 1 ರೂಪಾಯಿ ಏರಿಸಲಾಗಿದೆ.