April 3, 2025

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ

0

ಮುಂಬೈ: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದ ಬಿಸಿಸಿಐ, ರೋಹಿತ್ ಶರ್ಮಾ ಅವರಿಗೆ ಕಪ್ತಾನಗಿರಿ ವಹಿಸಿತ್ತು. ಆದರೆ ರೋಹಿತ್ ಗಾಯಗೊಂಡ ಪರಿಣಾಮ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಹುಲ್ ಗೆ ತಂಡವನ್ನು ಮುನ್ನಡೆಸುವ ಅದೃಷ್ಟ ಲಭಿಸಿದೆ. ಬಲಗೈ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ ಉಪನಾಯಕ ಆಗಿರಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿ ನಾಯಕತ್ವದ ಜವಾಬ್ದಾರಿ ಕನ್ನಡಿಗ ಕೆ.ಎಲ್. ರಾಹುಲ್ ಹೆಗಲ ಮೇಲಿದೆ.

 

 

ಟೀಮ್ ಇಂಡಿಯಾ ಇಂತಿದೆ:
1. ಕೆ.ಎಲ್. ರಾಹುಲ್ (ನಾಯಕ)
2. ವಿರಾಟ್ ಕೊಹ್ಲಿ
3. ಶಿಖರ್ ಧವನ್
4. ಋತುರಾಜ್ ಗಾಯಕವಾಡ್
5. ಸೂರ್ಯಕುಮಾರ್ ಯಾದವ್,
6. ಶ್ರೇಯಸ್ ಅಯ್ಯರ್
7. ವೆಂಕಟೇಶ್ ಅಯ್ಯರ್
8. ರಿಷಭ್ ಪಂತ್ (ವಿಕೆಟ್ ಕೀಪರ್)
9. ಇಶಾನ್ ಕಿಶನ್ (ವಿಕೆಟ್ ಕೀಪರ್)
10. ಯಜುವೇಂದ್ರ ಚಾಹಲ್,
11. ವಾಷಿಂಗ್ಟನ್ ಸುಂದರ್,
12. ಜಸ್ಪ್ರೀತ್ ಬೂಮ್ರಾ (ಉಪನಾಯಕ)
13. ಭುವನೇಶ್ವರ್ ಕುಮಾರ್
14. ದೀಪಕ್ ಚಾಹರ್
15. ಪ್ರಸಿದ್ದ ಕೃಷ್ಣ
16. ಶಾರ್ದೂಲ್ ಠಾಕೂರ್
17. ಮೊಹಮ್ಮದ್ ಸಿರಾಜ್
18. ಆರ್. ಅಶ್ವಿನ್

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 19, 21 ಹಾಗೂ 23ನೇ ದಿನಾಂಕಗಳಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.

Leave a Reply

Your email address will not be published. Required fields are marked *

You may have missed

error: Content is protected !!