July 13, 2026

ವಿಟ್ಲ ಕಜೆ ಡೆಂಟಲ್ ಕೇರ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ:  ಬೊಬ್ಬೆಕೇರಿ ಹರಿಹರ ಕಾಂಪ್ಲೆಕ್ಸ್ ಗೆ ಸ್ಥಳಾಂತರ

0
image_editor_output_image1058457294-1775977423161

ವಿಟ್ಲ: ಕಜೆ ಡೆಂಟಲ್ ಕೇರ್ ಸಂಸ್ಥೆಯು 25 ವರ್ಷ ಪೂರೈಸಿದ ಸಂದರ್ಭದಲ್ಲಿ ಮತ್ತಷ್ಟು ಸ್ಥಳಾವಕಾಶ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ  ವಿಟ್ಲ ಮಂಗಳೂರು ರಸ್ತೆಯ ಬ್ಯಾಂಕ್ ಆಫ್ ಬರೋಡಾ ಬಳಿ ಹರಿಹರ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶನಿವಾರ ಶುಭಾರಂಭಗೊಂಡಿತು.

ವಾಸ್ತುತಜ್ಞ ಪ್ರಸನ್ನ ಮುಳಿಯಾಲ ದೀಪ ಪ್ರಜ್ವಲಿಸಿ, ಮಾತನಾಡಿ ಡಾ. ಚರಣ್ ಕಜೆ ಅವರ ಆರೋಗ್ಯದ ಕ್ಷೇತ್ರದ ಸಾಧನೆ ಶ್ಲಾಘನೀಯ ಎಂದರು.‌

ಅತಿಥಿಗಳಾಗಿ ಫ್ಯಾಮಿಲಿ ಫಿಸಿಶಿಯನ್ ಡಾ.ವಿ.ಕೆ.ಹೆಗ್ಡೆ ಮಾತನಾಡಿ ಡಾ. ಚರಣ್ ಕಜೆ ಅವರು ಕಳೆದ 25 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡಿದ್ದರ ಫಲವಾಗಿ ಇಂದು ಅವರ ಪ್ರಾಮಾಣಿಕ ಸೇವೆಗೆ ಫಲ ಸಿಕ್ಕಿದೆ ಎಂದರು.

ಉದ್ಯಮಿ ಸುಬ್ರಾಯ ಪೈ ಮಾತನಾಡಿ ಚರಣ್ ಕಜೆ ಅವರು ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದರು.

ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕ ರಶೀದ್ ವಿಟ್ಲ, ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಸಂಘದ ನಿಯೋಜಿತ  ಅಧ್ಯಕ್ಷ ಡಾ.ರಾಘವೇಂದ್ರ ಪಿದಮಲೆ, ವಿಟ್ಠಲ್ ಕನ್ ಸ್ಟ್ರಕ್ಷನ್ ನ ಸುರೇಶ ಬನಾರಿ ಮಾತನಾಡಿ ಶುಭ ಹಾರೈಸಿದರು.

ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕ ರಶೀದ್ ವಿಟ್ಲ, ನರಸಿಂಹ ಕಜೆ, ಶಾಂತಾ ಕಜೆ, ದೇವಸ್ಯ ಮಹಾಬಲೇಶ್ವರ ಭಟ್, ಪ್ರೇಮಲತಾ, ರಮೇಶ್ ಕಜೆ, ರಾಜಾರಾಮ ಬಲಿಪಗುಳಿ, ಡಾ.ರವಿಕಿರಣ್, ಡಾ.ಶಶಿಧರ್ ಕಜೆ, ಕೃಷ್ಣರಾಜ, ಕಿರಣ್ ಕಜೆ, ಡಾ.ಗೋವಿಂದಪ್ರಸಾದ್ ಕಜೆ, ಡಾ.ರಮ್ಯಾ ಕಜೆ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸುರೇಶ್, ಬಿಂದು, ಲೀಲಾವತಿ ಅವರನ್ನು ಗೌರವಿಸಲಾಯಿತು.

ಡಾ.ಚರಣ್ ಕಜೆ ಸ್ವಾಗತಿಸಿದರು. ಸಾನ್ವಿ ಕಜೆ, ಮಾನ್ವಿ ಕಜೆ, ಆತ್ಮಶ್ರೀ, ಆದಿಶ್ರೀ ಆಶಯಗೀತೆ ಹಾಡಿ, ಕಾರ್ಯಕ್ರಮ ನಿರೂಪಿಸಿದರು. ಡಾ.ರಮ್ಯಾ ಕಜೆ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!