July 12, 2026

ವಿಟ್ಲ : ಹೊರೈಝನ್ ಪಬ್ಲಿಕ್ ಸ್ಕೂಲ್ : ಶಾಲಾ ಟಾಪರ್‌ಗೆ ಚಿನ್ನದ ನಾಣ್ಯ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0
IMG-20260712-WA0058

ವಿಟ್ಲ: ವಿಟ್ಲ ಹೊರೈಝನ್  ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಕಳೆದ ಎಸ್.ಎಸ್.ಎಲ್‌.ಸಿ ಯಲ್ಲಿ ಸಾಧನೆಗೈದ  ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು  ಝುಬೈರ್  ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಶಾಲೆಯು ಪ್ರತಿ ವರ್ಷ SSLC ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮುವ ವಿದ್ಯಾರ್ಥಿಗೆ ಚಿ‌ನ್ನದ ನಾಣ್ಯವನ್ನು ಪ್ರದಾನ ಮಾಡುತ್ತಿದ್ದು, ಈ ಬಾರಿ 600 ಅಂಕಗಳಿಸಿದ ಎನ್ ಫಾತಿಮಾ ಳಿಗೆ ಚಿನ್ನದ ನಾಣ್ಯವನ್ನು ನೀಡಿ ಸನ್ಮಾನಿಸಲಾಯಿತು. ಇದರೊಂದಿಗೆ ಡಿಸ್ಟಿಂಕ್ಷನ್ ಪಡೆದ 14 ವಿದ್ಯಾರ್ಥಿಗಳನ್ನು ಹಾಗೂ 100 ಶೇಕಡಾ ಫಲಿತಾಂಶ ದಾಖಲಿಸುವಲ್ಲಿ ಶ್ರಮಿಸಿದ ಶಿಕ್ಷಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್ , ಕಾರ್ಯದರ್ಶಿ ನೋಟರಿ ಅಬೂಬಕರ್ ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ ,ಟ್ರಸ್ಟಿಗಳಾದ ಇಸಾಕ್ ಸಾಹೇಬ್, ಅಬ್ದುಲ್ ಹಮೀದ್ ಬದ್ರಿಯಾ ,ವಿಟ್ಲ ಕೇಂದ್ರ ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು, ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಅನಿಲಕಟ್ಟೆ ಮುಂತಾದವರು ಉಪಸಿತರಿದ್ದರು


   ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಾಸ್ತಾವಿಕ ಭಾಷಣ ಮಾಡಿದರು.ಉಪ ಮುಖ್ಯ ಶಿಕ್ಷಕಿ ಗಾಯತ್ರಿ ಅಡ್ವಾಳ  ಸ್ವಾಗತಿಸಿದರು. ಶಿಕ್ಷಕಿಯರಾದ ರಾಹಿಸ್ತಾ ಮತ್ತು ಸಮೀಯ ನಿರೂಪಿಸಿದರು. ಸಲ್ವಾನ್
ವಂದಿಸಿದರು.

Leave a Reply

Your email address will not be published. Required fields are marked *

error: Content is protected !!