February 18, 2026

ವ್ಯಾಲೆಂಟೆನ್ಸ್‌ ಡೇ ಪಾರ್ಟಿ ಬಳಿಕ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ

0
image_editor_output_image1872315723-1771407769181.jpg

ಹರಿಯಾಣ: ವ್ಯಾಲೆಂಟೆನ್ಸ್‌ ಡೇ ಪಾರ್ಟಿ ಬಳಿಕ ಪತಿಯೇ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹಂಸಿಯ ಮಹಾಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25 ರಂದು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಹತ್ಯೆಯಾದ ಮಹಿಳೆಯನ್ನು ಮಹಾಕ್ ಎಂದು ಗುರುತಿಸಲಾಗಿದೆ. ಆಕೆ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಹತ್ಯೆ ಆರೋಪಿಯನ್ನು ಅನ್ಶುಲ್ ಧವನ್ ಎಂದು ಗುರುತಿಸಲಾಗಿದೆ. ಈತ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ. ದಂಪತಿ ಪ್ರೇಮಿಗಳ ದಿನವನ್ನು ಸಂಭ್ರಮದಿಂದಲೇ ಆಚರಿಸಿದ್ದರು.

ನಂತರ ಧವನ್‌ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದ. ಬಳಿಕ ದರೋಡೆಕೋರರು ತಮ್ಮ ಮೇಲೆ ದಾಳಿ ಮಾಡಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಕತೆ ಕಟ್ಟಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಕೇವಲ 18 ಗಂಟೆಗಳಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!