ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟದಿಂದ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅಮಾನತು
ಲಿಸ್ಟನ್,: ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ತಂಡದ ಶಿಬಿರದಿಂದ ಅರ್ಧದಲ್ಲೇ ಹೊರನಡೆದ ಪೋರ್ಚುಗಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ಅಮಾನತುಗೊಳಿಸಿದೆ. ಅಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಮಿತಿಯೊಂದನ್ನು ರಚಿಸಿದೆ.
ಮುಖ್ಯ ಕೋಚ್ ಜಾರ್ಜ್ ಜೀಸಸ್ ಜತೆಗಿನ ಮನಸ್ತಾಪ ಹಾಗೂ ಆಡುವ ಬಳಗದಲ್ಲಿ ಅವಕಾಶ ನೀಡದ ಕಾರಣಕ್ಕೆ 41ರ ಹರೆಯದ ರೊನಾಲ್ಡ್ ಸಿಟ್ಟಿನಿಂದ ತಂಡ ತೊರೆದಿದ್ದರು. ಇದು ಶಿಸ್ತು ಉಲ್ಲಂಘನೆ ಎಂದು ಒಕ್ಕೂಟ ಗಂಭೀರವಾಗಿ ಪರಿಗಣಿಸಿದೆ.






