ಉಪ್ಪಿನಂಗಡಿಯಲ್ಲಿ ಹೊಸ ಟೋಲ್ ಕೇಂದ್ರ ಆರಂಭ: ಬ್ರಹ್ಮರಕೂಟ್ಟು ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದ SDPI ಕಾರ್ಯಕರ್ತರು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ತುಂಬೆ ಬಳಿಯ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾದಲ್ಲಿ sdpi ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.
ಟೋಲ್ ತೆರವು ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಏಕಾಏಕಿ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಉಪ್ಪಿನಂಗಡಿ ಬಳಿಯ ವಳಾಲು ವಿನಲ್ಲಿ ಹೊಸ ಟೋಲ್ ಕೇಂದ್ರ ಆರಂಭಿಸಲಾಗಿದ್ದು ಅಲ್ಲಿನ ಟೋಲ್ ಪ್ಲಾಜಾ ಆರಂಭದ ಬಳಿಕ ಇಲ್ಲಿ ಮುಚ್ಚಿಸಲಾಗುವುದೆಂದು ಹೇಳಲಾಗಿತ್ತು. ಆದರೆ, ಇಲ್ಲಿ ಬಂದ್ ಮಾಡದೇ ಇರುವುದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಬಿ.ಸಿ.ರೋಡ್ ಟೋಲ್ ಗೆ ಮುತ್ತಿಗೆ ಹಾಕಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಪೊಲೀಸರು ಆಗಮಿಸಿದ್ದು ಟೋಲ್ ಕೇಂದ್ರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರನ್ನು ವಶಕ್ಕೆ ಬಳಿಕ ಬಂಟ್ವಾಳ ಠಾಣೆಗೆ ಪಡೆದಿದ್ದಾರೆ. ಕರೆದೊಯ್ದಿದ್ದಾರೆ.




