November 26, 2026

ವಿಟ್ಲ: ಚಿಕ್ಕಪ್ಪನನ್ನು ಹತ್ಯೆಗೈದ ಯುವತಿಗೆ ನ್ಯಾಯಾಂಗ ಬಂಧನ

0
image_editor_output_image-720703428-1795709758770

ವಿಟ್ಲ : ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (೫೫) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ರಿಶಿಕಾ(24)ಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಚೆನ್ನಯ್ಯ ಪೂಜಾರಿ ಕಂಠಪೂರ್ತಿ ಕುಡಿದು ಆತನ ಅಣ್ಣನ ಮಗಳಿಗೆ ತೊಂದರೆ ಕೊಡುತ್ತಿದ್ದನೆನ್ನಲಾಗಿದೆ. ಈ ಸಂದರ್ಭದಲ್ಲಿ ಕತ್ತಿಯನ್ನು ಬೀಸಿದ್ದಾಳೆ. ಅದು ಆತನ ಎದೆಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದ.

ಆತನನ್ನು ಕೂಡಲೇ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ವರ್ಗಾಯಿಸಿದ್ದರೂ ಅಲ್ಲಿ ಮೃತ ಮಟ್ಟಿರುವುದಾಗಿ ದೃಢ ಪಡಿಸಿದ್ದಾರೆ. ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಮುಕ್ತಾಯಗೊಂಡಿದೆ. ಆರೋಪಿ ಹೃಶಿಕಾಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!