ಕೊಡಂಗಾಯಿ: ಬಿ.ರಮಾನಾಥ ರೈ ಅವರು ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ-ಟೈಲರಿಂಗ್ ಮಿಷನ್ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ
ವಿಟ್ಲ: ಶ್ರೀ ಬಿ. ರಮಾನಾಥ ರೈ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೊಡಂಗಾಯಿಯಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಮಾಜಿ ಸಚಿವ ಬಿ ರಮಾನಾಥ ರೈ ಅವರು ಆಗಮಿಸಿ, ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ವಿತರಿಸಿದರು.
ಅವಶ್ಯ ಫೌಂಡೇಶನ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಕಂಕನಾಡಿ, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಹಾಗೂ ಶ್ರೀ ಬಿ. ರಮಾನಾಥ ರೈ ಹುಟ್ಟುಹಬ್ಬ ಆಚರಣಾ ಸಮಿತಿ ದ.ಕ. ಜಿಲ್ಲೆ, ಶ್ರೀ ಬಿ. ರಮಾನಾಥ ರೈ ಅಭಿಮಾನಿ ಬಳಗ ವಿಟ್ಲ ಪಡ್ನೂರು ಮತ್ತು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇವರ ಸಹಯೋಗದಲ್ಲಿ ಶಿಬಿರ, ಟೈಲರಿಂಗ್ ಯಂತ್ರ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ರಮಾನಾಥ ರೈ ಅವರ ದ.ಕ ಜಿಲ್ಲಾ ಹುಟ್ಟು ಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ರಮಾನಾಥ ರೈ ಅವರ ಹುಟ್ಟುಹಬ್ಬ ಆಚರಣೆಯನ್ನು ಜಿಲ್ಲೆಯಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್ ರಮಾನಾಥ ರೈ ಅವರು ಅಭಿವೃದ್ಧಿಯ ಹರಿಕಾರ. ಅವರ ಅವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಿದೆ ಎಂದರು.
ಕಾರ್ಯಕ್ರಮದ ಸಂಯೋಜಕ ಸಂದೇಶ್ ಶಟ್ಟಿ ಬಿಕ್ನಾಜೆ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಚರ್ಮರೋಗ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲುಗಳ ತಪಾಸಣೆ, ರಕ್ತದೊತ್ತಡ, ಮಧುಮೇಹ ಹಾಗೂ ಕಿವಿ-ಮೂಗು-ಗಂಟಲು (ENT) ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.
ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿಟ್ಲ ಪಡೂರು ಗ್ರಾಮದ ಮೂವರು ಬಡ ಮಹಿಳೆಯರಿಗೆ ಉಚಿತ ಟೈಲರಿಂಗ್ ಯಂತ್ರ ವಿತರಣೆ ಹಾಗೂ ಅಡಿಕೆ ಮತ್ತು ತೆಂಗಿನ ಮರ ಹತ್ತುವ ಕೂಲಿ ಕಾರ್ಮಿಕರಿಗೆ ಸುಮಾರು ₹15 ಲಕ್ಷ ಮೊತ್ತದ ಉಚಿತ ಜೀವ ವಿಮೆ ನೀಡಲಾಯಿತು.
ಜೂನಿಯರ್ ವೈಟ್ ಲಿಫ್ಟಿಂಗ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಬಿ. ಪ್ರಧಮ್ ರಾಘವ ಗೌಡ ಬನ ಹಾಗೂ ಬಯೋಟೆಕ್ನಾಲಜಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 180 ಕ್ಕಿಂತಲೂ ಅಧಿಕ ಜನರಿಗೆ ಉಚಿತ ಕನ್ನಡ ವಿತರಣೆ ಮಾಡಲಾಯಿತು ಸುಮಾರು 220 ಜನರಿಗೆ ವೈದ್ಯಕೀಯ ಉಚಿತ ತಪಾಸಣಾ ಸೇವೆಯನ್ನು ಮಾಡಲಾಯಿತು ವಿಶೇಷವಾಗಿ ತೆಂಗಿನ ಮರ ಮತ್ತು ಅಡಿಕೆಮರ ಹತ್ತುವ 18 ಜನರಿಗೆ ಉಚಿತ ಅಪಘಾತ ವಿಮೆಯನ್ನು ಸ್ಥಳದಲ್ಲಿ ಮಾಡಿ ನೀಡಲಾಯಿತು
ಪ್ರಮುಖರಾದ ಅಬ್ಬಾಸ್ ಆಲಿ, ಚಂದ್ರಶೇಖರ್ ಭಂಡಾರಿ, ಸುದರ್ಶನ್ ಪಡಿಯಾರ್, ಚಂದ್ರಹಾಸ ಗೌಡ ಬನ, ಹಸೈನರ್ ತಾಳಿ ತ್ತನೂಜಿ, ಪವಿತ್ರ ಪೂಂಜ ಕೊಡಂಗೆ, ಎ ಬಿ ಅಬ್ದುಲ್ಲಾ, ಕೊಳ್ನಾಡು ಶೋಭಾ ರೈ, ಪ್ರಜ್ಞ ಕೌನ್ಸಿಲಿಂಗ್ ನ ಕೌನ್ಸಿಲರ್ ವಿಜಯ ಶೆಟ್ಟಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಮಂತ್ ಶೆಟ್ಟಿ, ವೆಂಕಟರಮಣ ಭಟ್ ಮೂರ್ಖಜೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ಆರ್ ಕೆ, ಕೆಎಂಸಿಯ ವೈದ್ಯಾಧಿಕಾರಿ ಡಾ. ಕೇಶವ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಮಂತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಬಿ ಸಂದೇಶ್ ಶೆಟ್ಟಿ ಸ್ವಾಗತಿಸಿದರು.






