ಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ: ಪ್ರಿಯಕರನ ಬಂಧನ
ಬೆಂಗಳೂರು: ನಗರದ ಕಾಟನ್ ಪೇಟೆಯ ಮಸ್ತಾನ್ ದರ್ಗಾ ಬಳಿಯ ಲಾಡ್ಜ್‌ವೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಪ್ರಿಯಕರ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಇಬ್ಬರು ಕೂಡ ಕೇರಳದ ಆಡೂರು ಮೂಲದವರಾಗಿದ್ದು, ಗಂಗಾ ಕೊಲೆಯಾದ ವಿದ್ಯಾರ್ಥಿನಿ. ಪ್ರಿಯಕರನನ್ನು ಗೋಕುಲ್ ಕೃಷ್ಣ ಎಂದು ಗುರುತಿಸಲಾಗಿದೆ.
ಮೃತ ಗಂಗಾ ಹಾಗೂ ಆರೋಪಿ ಗೋಕುಲ್ ಇಬ್ಬರು ಕಳೆದ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊಲೆಗೆ ಮುನ್ನ ಆರೋಪಿ ಚಾಕು ಖರೀದಿ ಮಾಡಿದ್ದು, ನವೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಸುಮಾರಿಗೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.




