ವಿಟ್ಲ ಪಡ್ನೂರು: ಹೊಂಡ ಬಿದ್ದ ರಸ್ತೆಗೆ ತೇಪೆ ಕಾರ್ಯ ನಡೆಯುತ್ತಿದ್ದರೂ ಅದನ್ನು ನಿಲ್ಲಿಸಿ, ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್: ಬಿಜೆಪಿ ವಕ್ತಾರ ಮಾಧವ ಮಾವೆ ಆಕ್ರೋಶ
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ಹೊಂಡ ಬಿದ್ದಿರುವ ರಸ್ತೆಗೆ ಇದೀಗ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದರೂ ಕಾಂಗ್ರೆಸ್ ಮುಖಂಡರು ತೇಪೆ ನಿಲ್ಲಿಸಿ ಎಂದು ಹೇಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಅವರು ಹೇಳಿದ್ದಾರೆ.
ಕಡಂಬು ಭಾಗದಲ್ಲಿ ಮತ್ತೆ ತೇಪೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ, ಮಾಧ್ಯಮದವರ ಜತೆ ಮಾತನಾಡಿದರು.
ಒಂದು ಬಾರಿ ಡಾಮರೀಕರಣ ನಡೆದು ಬಳಿಕ ಐದು ವರ್ಷ ನಿರ್ವಹಣೆ ಕಾರ್ಯ ನಡೆಯಲಿದೆ. ಅದರಂತೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುರತ್ಕಲ್ -ಕಬಕ ವರೆಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದೆ. ಬೇರೆ ಎಲ್ಲಿಯೂ ತೇಪೆ ಕಾರ್ಯ ನಡೆಯುತ್ತಿಲ್ಲ. ಇಲ್ಲಿ ಮಾತ್ರ ಬಂಟ್ವಾಳ ಶಾಸಕರ ವಿಶೇಷ ಮುತುವರ್ಜಿಯಲ್ಲಿ ತೇಪೆ ಕಾರ್ಯ ನಡೆಯುತ್ತಿದೆ. ತೇಪೆ ಕಾರ್ಯ ಮಾಡುವಂತೆ ಮಾಡಿದ್ದಾರೆ. ಆದ್ರೆ ಕೆಲವರು ತೇಪೆ ಹಾಕುವ ಕಾರ್ಯವನ್ನು ನಿಲ್ಲಿಸಲು ಹೇಳಿದ್ದಾರೆ. ತೇಪೆ ಹಾಕುವ ಕಾರ್ಯಕ್ಕೆ ಅಡ್ಡ ಬರುವುದು ಸರಿಯಲ್ಲ. ಸಾರ್ವಜನಿಕರು ಯಾರೂ ಕೂಡಾ ಹೇಳಿಲ್ಲ. ಕೇವಲ ಪಕ್ಷದ ಮುಖಂಡರು ಮಾತ್ರ ಹೇಳುತ್ತಿದ್ದಾರೆ.
ಕಡಂಬು ಮತ್ತು ಕುಡ್ತಮುಗೇರು ಎರಡು ಭಾಗದ ರಸ್ತೆ ತಗ್ಗು ಪ್ರದೇಶವಾಗಿದೆ. ಇಲ್ಲಿ ನೀರು ನಿಂತು ರಸ್ತೆ ಪ್ರತಿವರ್ಷ ಹೊಂಡ ಬೀಳುತ್ತಿದೆ. ಈ ಪ್ರದೇಶವನ್ನು ಸ್ವಲ್ಪ ಎತ್ತರ ಮಾಡಿ, ಡಾಮರೀಕರಣ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳಲು 50 ಲಕ್ಷ ರೂ. ಅನ್ನು ಇಡಲಾಗಿದೆ. ಇದೇ ರೀತಿಯ ಹಲವಾರು ರಸ್ತೆ ಅಭಿವೃದ್ಧಿ ಬಂಟ್ವಾಳ ಶಾಸಕರು ಮಾಡಿದ್ದಾರೆ.
ಈ ರಸ್ತೆ ಗೆ ಡಾಮರೀಕರಣ ನಡೆಸಲು ಅನುದಾನ ಸರಕಾರ ನೀಡುತ್ತಿಲ್ಲ. ಮತ್ತೆ ಹೇಗೆ ಡಾಮರೀಕರಣ ಮಾಡುವುದು ಎಂದು ಮಾಧವೆ ಅವರು ಹೇಳಿದ್ದಾರೆ.
ಪಂಚ ಗ್ಯಾರೆಂಟಿಯ ಕಾರಣಕ್ಕೆ ಕಾಂಗ್ರೆಸ್ ಸರಕಾರದ ಬೊಕ್ಕಸ ಬರಿದಾಗಿದೆ. ಅನುದಾನ ಬಿಡುಗಡೆ ಮಾಡುತ್ತಿಲ್ಲ. ಶಾಸಕ ರಾಜೇಶ್ ನಾಯ್ಕ್ ಅವರ ಒತ್ತಾಯದ ಮೇರೆಗೆ ಇನ್ನೂ ಹಲವಾರು ಯೋಜನೆಗಳು ನಡೆಯಲಿವೆ. ಕಡಂಬು ಮತ್ತು ಕುಡ್ತಮುಗೇರು ಎಂಬಲ್ಲಿ ರಸ್ತೆಯಲ್ಲಿ ನೀರು ನಿಂತು ಹೊಂಡಮಯವಾಗುತ್ತದೆ.
ಬಿಜೆಪಿ ಮುಖಂಡರಾದ ರವೀಶ್ ಶೆಟ್ಟಿ ಕರ್ಕಳ, ರಾಜಾರಾಮ ಬಲಿಪಗುಳಿ, ಅರವಿಂದ ರೈ ಮೂರ್ಜೆಬೆಟ್ಟು, ಜಯಂತ್ ಪಿ.,
ನಾಗೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ನಾಗೇಶ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.




