ಒತ್ತುವರಿ ವಿಚಾರಕ್ಕೆ ಗಲಾಟೆ: ಗುಂಡು ಹಾರಿಸಿ ಯುವಕನ ಕೊಲೆ
ಬೆಂಗಳೂರು: ಒತ್ತುವರಿ ವಿಚಾರಕ್ಕೆ ಶುರುವಾದ ಗಲಾಟೆ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಗುಂಡು ಹಾರಿಸಿ ಯುವಕನನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಯಲದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ.
ಲಿಖಿಕ್ ಗೌಡ ( 25 ) ಕೊಲೆಯಾದ ಯುವಕ. ರಮೇಶ್ ಕೊಲೆಗೈದ ಆರೋಪಿ.
ಆಶ್ರಯ ಯೋಜನೆ ಜಮೀನು ಗುರುತು ಮಾಡುವ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಸರ್ಕಾರಿ ಜಾಮೀನಿನ ಸುಮಾರು 10 ಗುಂಟೆ ಜಾಗವನ್ನ ಆರೋಪಿ ರಮೇಶ್ ಒತ್ತುವರಿ ಮಾಡಿಕೊಂಡಿದ್ದ. ಹೀಗಾಗಿ ಒತ್ತುವರಿ ತೆರವಿಗೆ ಹೋಗಿದ್ದ ವೇಳೆ ರಮೇಶ್ ಮತ್ತು ಲಿಖಿತ್ ಗೌಡ ನಡುವೆ ಗಲಾಟೆ ನಡೆದಿದೆ. ಈ ವೇಳೆ ಲೈಸೆನ್ಡ್ ಗನ್ ನಿಂದ ರಮೇಶ್, ಲಿಖಿತ್ ಗೌಡ ಮೇಲೆ ಗುಂಡು ಹಾರಿಸಿದ್ದಾನೆ.




