ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ-ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಗುರುವಾರ ನಡೆಯಿತು.
ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜಿನ ಉಪನ್ಯಾಸಕ ಅನಿಲ್ ಮಸ್ಕರೇಂಞಸ್ ಅವರು ಮಾತನಾಡಿ
ಉತ್ತಮ ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗದೇ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಗಮನಹರಿಸಬೇಕು. ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ತಮಗೆ ಸಿಕ್ಕಿರುವ ಅವಕಾಶಗಳನ್ನು ವ್ಯರ್ಥ ಮಾಡದೇ ಜೀವನದಲ್ಲಿ ಗುರಿ ಇಟ್ಟು ಮುನ್ನಡೆಯಬೇಕು ಎಂದರು.


ಶಾಲಾ ಸಂಚಾಲಕ ಮೈಕಲ್ ಲೊಬೋ ಮಾತನಾಡಿ
ಕಷ್ಟಪಟ್ಟು ಶ್ರಮಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿಭೆ ಶಕ್ತಿ , ಮಕ್ಕಳ ಯಶಸ್ಸಿನ ಮೆಟ್ಟಿಲು. ಸೈಂಟ್ ರೀಟಾ ಶಾಲೆ ಕೇವಲ ಅಂಕಗಳನ್ನು ಮಾತ್ರ ಪಡೆಯಲು ಕಲಿಸುವುದಲ್ಲ ಅದರ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯವನ್ಬು ಕಳಿಸುತ್ತದೆ. ಪ್ರತಿಭೆಗೆ ಅವಕಾಶ ಇಲ್ಲಿ ಕಲ್ಪಿಸಲಾಗುತ್ತದೆ ಎಂದರು.
ಸ್ಕೌಟ್ ಮತ್ತು ಗೈಡ್ಸ್ ತರಬೇತುದಾರ ಶಿಕ್ಷಕಿ ಹೆಲೆನ್ ಎವೆಲಿನ್ ಫುರ್ಟಾಡೊ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ನಲ್ಲಿ ಸಾಧನೆಗೈದ
ಗುರುಪ್ರೀತ್, ಆಯಿಷತ್ ನೌಫೀದಾ, ವಿನೀತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಿಟ್ಲ ಶೋಕಮಾತೆ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ವೆಲೇರಿಯನ್ ವೇಗಸ್, ಶಾಲಾ ಮುಖ್ಯ ಶಿಕ್ಷಕ ಅಮೀತ್ ಪ್ರಕಾಶ್ ರೋಡಿಗ್ರಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಮರೀನಾ, ಕನ್ನಡ ಮಾಧ್ಯಮದ ವಿಭಾಗದ ಮುಖ್ಯ ಶಿಕ್ಷಕಿ ಜೋನೇಟ್, ಶಾಲಾ ನಾಯಕರಾದ ಜಾಯ್ಸಿ ಲೋಬೋ, ಅಲ್ವೀಶಾ ಪಾಯಸ್ ಉಪಸ್ಥಿತರಿದ್ದರು.
ಸಿಸ್ಟರ್ ಮರೀನಾ ಸ್ವಾಗತಿಸಿದರು.
ಕ್ಲಾರಿಸ್ ಜಾಯ್ಸಿ ಲೋಬೋ ವಂದಿಸಿದರು. ಸಿಸ್ಟರ್ ಲಿಡಿಯಾ ಮತ್ತು ವೈಶಾಲಿ ನಿರೂಪಿಸಿದರು.




