ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕ, ಕನ್ನಡ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ
ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ಕನ್ನಡ ಸಂಘದ ವತಿಯಿಂದ ‘ಸಮಕಾಲೀನ ವಿದ್ಯಮಾನಗಳು ಮತ್ತು ಯುವಜನತೆ’ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಇತಿಹಾಸ ತಜ್ಞ, ಸಾಹಿತಿ, ಖ್ಯಾತ ವಾಗ್ಮಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಶ್ರೀಯುತ ಪ್ರೊಫೆಸರ್ ನಿತ್ಯಾನಂದ. ಬಿ ಶೆಟ್ಟಿಯವರು ಪದವಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿದ್ಯಾಭ್ಯಾಸ ಎಂದರೆ ಕೇವಲ ಪುಸ್ತಕದ ಓದು ಅಲ್ಲ ಬದಲಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದು ಘಟನೆಯಲ್ಲೂ ಅಡಗಿ ಕೂಂಡಿರುವ ರಾಜಕೀಯವನ್ನು ಅರಿಯುವ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಓದು ಅರ್ಥವತ್ತಾಗುವುದು. ಭಗವದ್ಗೀತೆ,ಬೈಬಲ್,ಕುರ್ಆನ್ ಇತ್ಯಾದಿ ಧರ್ಮ ಗ್ರಂಥಗಳನ್ನು ಎಷ್ಟು ನಿಷ್ಠೆಯಿಂದ ಓದುತ್ತೇವೆಯೋ ಅದೇ ನಿಷ್ಠೆಯೊಂದಿಗೆ ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ನಮ್ಮೆಲ್ಲರ ಬದುಕು ಅತ್ಯಂತ ಸ್ಪಷ್ಟವಾದ ಸಾಮರಸ್ಯ ಹೊಂದಿದ ಬದುಕಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಾಹಿತ್ಯದ ಒಲವನ್ನು ಲೋಕಜ್ಞಾನದ ಪುಸ್ತಕಗಳನ್ನು ಓದುವ ಮೂಲಕ ಬೆಳೆಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.
ತದನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಲಾಯಿತು. ವಿಚಾರ ಶಕ್ತಿಯೇ ಮನುಷ್ಯನ ನಿಜವಾದ ಆಸ್ತಿ ಎಂಬುದನ್ನು ಈ ಉಪನ್ಯಾಸ ಕಾರ್ಯಕ್ರಮ ಸಾಬೀತುಪಡಿಸಿತು.
ಇತ್ತೀಚೆಗೆ ಬಿಡುಗಡೆಗೊಂಡ ಶ್ರೀಯುತರ *ಅಳವು ಅರಿಯದ ಭಾಷೆ-ಕಲೆ, ಸಮಾಜ,ಇತಿಹಾಸ* ಎಂಬ ಬೃಹತ್ ಅಧ್ಯಯನಾತ್ಮಕ ಕೃತಿಯನ್ನು ಕಾಲೇಜು ಲೈಬ್ರರಿಗೆ ಉಡುಗೊರೆಯಾಗಿ ನೀಡಿದರು.
ವೇದಿಕೆಯಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಯುತ ಯಾಸಿನ್ ಬೇಗ್, ಖಜಾಂಜಿ ಶ್ರೀಯುತ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ , ಕನ್ನಡ ಸಂಘದ ಪದಾಧಿಕಾರಿ ಶ್ರೀಮತಿ ರೇಷ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳಾದ ಅಮರ್ ಮತ್ತು ಧನುಷ್ ರವರು ಕೂಡ ಭಾಗವಹಿಸಿದ್ದರು. ಬೋಧಕ ಬೋಧಕೇತರ ವೃಂದದವರು ಭಾಗವಹಿಸಿದ ಈ
ಕಾರ್ಯಕ್ರಮಕದಲ್ಲಿ ಪ್ರಥಮ ಬಿ .ಸಿ .ಎ.ವಿಭಾಗದ ಕುಮಾರಿ ಫಾತಿಮಾ ನಾಫಿಯಾ ಕಿರಾಅತ್ ಪಠಿಸಿದರು. ಕನ್ನಡ ಭಾಷಾ ವಿಭಾಗದ ಉಪನ್ಯಾಸಕಿ
ಶ್ರೀಮತಿ ರೇಷ್ಮಾ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಬಿ.ಎ. ವಿಭಾಗದ ಕುಮಾರಿ ಫಾತಿಮತ್ ಶಮಿಯ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.


