July 2, 2026

ಕುತ್ತಿಗೆಗೆ ಕುಣಿಕೆ ಹಾಕಿ ರೀಲ್ಸ್ ಮಾಡುವಾಗ ಮಹಿಳೆ ಸಾವು

0
image_editor_output_image-230459616-1770454569407.jpg

ಲಕ್ನೋ: ರೀಲ್ಸ್ ಮಾಡಲು ಹೋಗಿ ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ.

ಮೋಹಿನಿ (27) ಮೃತ ಮಹಿಳೆ. ಮೋಹಿನಿ ನೇಣು ಹಾಕಿಕೊಳ್ಳುವ ದೃಶ್ಯವೊಂದನ್ನು ರೀಲ್ಸ್ ಮಾಡುತ್ತಿದ್ದಳು. ಸ್ಟೂಲ್‌ನಲ್ಲಿ ನಿಂತು ಕುತ್ತಿಗೆಗೆ ನೇಣು ಹಾಕಿಕೊಂಡ ಸಂದರ್ಭ ಸ್ಟೂಲ್‌ನಿಂದ ಆಯತಪ್ಪಿ ಕುಣಿಕೆ ಬಿಗಿಯಾಗಿ ಮೋಹಿನಿ ಮೃತಪಟ್ಟಿದ್ದಾಳೆ.

ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ತಾಯಿಯನ್ನು ನೋಡಿ ಬಾಲಕಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಬಾಲಕಿಯ ಕೂಗು ಕೇಳಿ ನೆರೆಹೊರೆಯವರು ಒಳಗೆ ಧಾವಿಸಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕುಣಿಕೆಯಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ರೀಲ್ಸ್ ಮಾಡುವ ವೇಳೆ ಆಕಸ್ಮಿಕವಾಗಿ ಕುಣಿಕೆ ಬಿಗಿದು ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!